ದೇಶ

ಸಿಎಎ ಹಿಂಸಾಚಾರ; ಅಸ್ಸಾಂ ಪ್ರವಾಸೋದ್ಯಮಕ್ಕೆ ಸಾವಿರ ಕೋಟಿ ರೂ. ನಷ್ಟ

Srinivasamurthy VN

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹೋರಾಟದಿಂದ ಅಸ್ಸಾಂ ಪ್ರವಾಸೋದ್ಯಮ ಇಲಾಖೆಗೆ 1000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ.

ಅಸ್ಸಾಂ ಪ್ರವಾಸೋದ್ಯಮದ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಂತ ಮಲ್ಲ ಬೌರಾ, ಪ್ರತಿಭಟನೆ, ಹಿಂಸಾಚಾರದಲ್ಲಿ ವಿದೇಶಿಗರು ಮತ್ತು ದೇಶೀಯ ಪ್ರವಾಸಿಗರು ಕೂಡ ಕಾಯ್ದಿರಿಸಿದ ಸೀಟುಗಳನ್ನು ರದ್ದುಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಮೆರಿಕ, ಐರೋಪ್ಯ ಒಕ್ಕೂಟ, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ, ಫ್ರಾನ್ಸ್, ಇಸ್ರೇಲ್, ತೈವಾನ್, ರಷ್ಯಾ ಮತ್ತು ಸಿಂಗಾಪುರ ಸೇರಿದಂತೆ ಕನಿಷ್ಠ 10 ದೇಶಗಳು ತಮ್ಮ ಪ್ರಜೆಗಳಿಗೆ, ಅಸ್ಸಾಂಗೆ ಪ್ರವಾಸ ಕೈಗೊಳ್ಳದಂತೆ ಸುತ್ತೋಲೆ ಬಿಡುಗಡೆಗೊಳಿಸಿದೆ ಎಂದರು. ಪ್ರಮುಖವಾಗಿ ಡಿಸೆಂಬರ್ ನಿಂದ ಮಾರ್ಚ್ ವರಗೆ ಅಸ್ಸಾಂನಲ್ಲಿ ಪ್ರವಾಸೋಧ್ಯಮ ಉತ್ತುಂಗದಲ್ಲಿರಬೇಕಿತ್ತು. ಆದರೆ ಸಿಎಎ ಪ್ರತಿಭಟನೆಯಿಂದಾಗಿ ಈ ಬಾರಿ ಪ್ರವಾಸಿಗರ ಸಂಖ್ಯೆ ಗಣನೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಡಿಸೆಂಬರ್ ನಿಂದ ಜನವರಿ ವೇಳೆ 500 ಕೋಟಿ ರೂ ನಷ್ಟವಾಗಿದೆ ಎಂದು ಬೌರಾ ಹೇಳಿದರು.

SCROLL FOR NEXT