ದೇಶ

ಕೇರಳ: ಸಿಎಎ ವಿರುದ್ಧ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯ್ ವಿಜಯನ್

Nagaraja AB

ತಿರುವನಂತಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ  ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯವೊಂದನ್ನು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್  ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಕೇರಳದಲ್ಲಿ ಬಂಧನ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಕೇರಳ ಜಾತ್ಯತೀತೆ ಬಗ್ಗೆ  ಧೀರ್ಘ ಇತಿಹಾಸವಿದೆ. ಗ್ರೀಕ್ಸ್, ರೋಮಾನ್ಸ್, ಅರಬ್ಸ್,  ಪ್ರತಿಯೊಬ್ಬರು ಈ ನೆಲಕ್ಕೆ ಬಂದಿದ್ದಾರೆ. ಕ್ರಿಶ್ಚಿಯನ್ ಮತ್ತು ಮುಸ್ಲಿಂರು ಆರಂಭದಿಂದಲೂ ಇದ್ದಾರೆ. ಎಲ್ಲರನ್ನು ಒಳ್ಳಗೊಳ್ಳುವಿಕೆ ನಮ್ಮ ಸಂಪ್ರದಾಯವಾಗಿದೆ. ನಮ್ಮ ವಿಧಾನಸಭೆಯು ಸಂಪ್ರದಾಯವನ್ನು ಉಳಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮುಖ್ಯಮಂತ್ರಿ ಪಿಣರಾಯ್ ಮಂಡಿಸಿದ ನಿರ್ಣಯವನ್ನು ಸಿಪಿಐ(ಎ) ಶಾಸಕ ಜೇಮ್ಸ್ ಮ್ಯಾಥ್ಯೂ ಅನುಮೋದಿಸಿದರು. 

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಹೇಳಿರುವ ರಾಜ್ಯಗಳ ಪೈಕಿ ಕೇರಳ ಒಂಬತ್ತನೇ ರಾಜ್ಯವಾಗಿದೆ. 

SCROLL FOR NEXT