ದೇಶ

ಸಿಬಿಐ ನಿರ್ದೇಶಕರಾಗಿ ಶುಕ್ಲಾ ನೇಮಕಕ್ಕೆ ಖರ್ಗೆ ಅಸಮಾಧಾನ: ಕೇಂದ್ರ ಸರ್ಕಾರ ತಿರುಗೇಟು

Raghavendra Adiga
ನವದೆಹಲಿ: ಸಿಬಿಐ ನ ನೂತನ ನಿರ್ದೇಶಕರನ್ನಾಗಿ ರಿಷಿಕುಮಾರ್ ಶುಕ್ಲಾ ನೇಮಕ ಸರಿಯಾದ ಕ್ರಮವಲ್ಲ. ಅವರಿಗೆ ಭ್ರಷ್ಟಾಚಾರ ವಿರೋಧಿ ಪ್ರಕರಣ ತನಿಖೆ ನಡೆಸಿದ ಅನುಭವವಿಲ್ಲ ಎಂದು ಕಾಂಗ್ರೆಸ್ ನಾಯಕ, ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿ ಸದಸ್ಯರೂ ಆದ ಮಲ್ಲಿಕಾರ್ಜುನ ಖರ್ಗೆ  ಹೇಳಿದ್ದಾರೆ. ಸಿಬಿಐ ನಿರ್ದೇಶಕರ ನೇಮಕ ಕುರಿತು ಅಸಮಾಧಾನ ಹೊಂದಿರುವ ಖರ್ಗೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತನ್ನ ಅತೃಪ್ತಿ ಹೊರಹಾಕಿದ್ದಾರೆ.
ಶುಕ್ಲಾ ಅವರ ನೇಮಕಾತಿ ವಿಚಾರವಾಗಿ ತಮ್ಮ ಅಸಮಾಧಾನ ತೋಡಿಕೊಂಡು ಖರ್ಗೆ ಪ್ರಧಾನಿಗೆ ಪತ್ರ ಬರೆದಿದ್ದರೆ ಸರ್ಕಾರ ಖರ್ಗೆ ಮಾತುಗಳಿಗೆ ಕಟುವಾಗಿ ಪ್ರತಿಕ್ರಯಿಸಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಖರ್ಗೆ ಆಯ್ಕೆ ಮಾನದಂಡಗಳನ್ನು ಬದಲಿಸಲು, ತಿರುಚಲು ಪ್ರಯತ್ನ ನಡೆಸಿದ್ದಾರೆ ಎಂದು ದೂರಿದ್ದಾರೆ.ಅವರು ಸೂಚಿಸಿದ್ದವರಲ್ಲೇ ಯಾರಾದರೊಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕಾಗಿತ್ತು ಎನ್ನುವುದು ಖರ್ಗೆ ಅವರ ಮಾತಿನ ಅರ್ಥವಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.
"ಖರ್ಗೆ ಮಾತುಗಳಿಗೆ ಯಾವ ಆಧಾರವಿಲ್ಲ. ಆಯ್ಜೆ ಸಮಿತಿ ಸದಸ್ಯಆಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸಹ ಸಿಬಿಐ ನಿರ್ದೇಶಕರ ಆಯ್ಕೆಗೆ ಸಮ್ಮತಿಸಿದ್ದಾರೆ ಎಂದು ಸಿಂಗ್ ಹೇಳಿದರು.
"ಕಾಂಗ್ರೆಸ್ ಮುಖಂಡ ಆಯ್ಕೆ ಸಮಿತಿ ಸಭೆಯಲ್ಲಿ ಮಾತನಾಡುವದನ್ನು ಬಿಟ್ಟು ಸಿಬಿಐ ನಿರ್ದೇಶಕರ ನೇಮಕದ ಪ್ರಕಟಣೆ ಹೊರಟ ಮೇಲೆ ಮಾದ್ಯಮದವರೆದುರು ಇನ್ನೊಂದೇ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
SCROLL FOR NEXT