ರಾಹುಲ್ ಗಾಂಧಿ-ಆಶಾ ಪಟೇಲ್ 
ದೇಶ

ನೀವು ಜಾತಿಗಳ ನಡುವೆ ವೈರತ್ವ ಬಿತ್ತುತ್ತಿದ್ದೀರ?; ರಾಹುಲ್‌ಗೆ ಪತ್ರ ಬರೆದು ಕಾಂಗ್ರೆಸ್ ತೊರೆದ ಶಾಸಕಿ!

ಕಾಂಗ್ರೆಸ್ ಪಕ್ಷವು ಜಾತಿ ಜಾತಿಗಳ ನಡುವೆ ವೈರತ್ವ ತರುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ತರುವ ಮೂಲಕ ಜಾತಿಗಳನ್ನು ಒಗ್ಗೂಡಿಸುತ್ತಿದ್ದಾರೆ ಎಂದು ಹೇಳಿ...

ಅಹಮದಾಬಾದ್: ಕಾಂಗ್ರೆಸ್ ಪಕ್ಷವು ಜಾತಿ ಜಾತಿಗಳ ನಡುವೆ ವೈರತ್ವ ತರುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ತರುವ ಮೂಲಕ ಜಾತಿಗಳನ್ನು ಒಗ್ಗೂಡಿಸುತ್ತಿದ್ದಾರೆ ಎಂದು ಹೇಳಿ ಗುಜರಾತ್ ನ ಕಾಂಗ್ರೆಸ್ ಶಾಸಕಿ ಆಶಾ ಪಟೇಲ್ ಶಾಸಕಿ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. 
ಕಾಂಗ್ರೆಸ್ ಪಕ್ಷದೊಳಗಿನ ಗುಂಪುಗಾರಿಕೆ ಹಾಗೂ ಒಳಜಗಳದಿಂದ ಬೇಸತ್ತು ತಾವು ಪಕ್ಷಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಆಶಾ ಪಟೇಲ್ ಹೇಳಿದ್ದಾರೆ. ಅಲ್ಲದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. 
ಪತ್ರದಲ್ಲಿ ಪ್ರಧಾನಿ ಮೋದಿ ಅವರು ಮೇಲ್ಜಾತಿ ಬಡವರಿಗೆ ಶೇಖಡ 10ರಷ್ಟು ಮೀಸಲಾತಿ ನೀಡಿದರೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷವು ಜಾತಿ ಜಾತಿಗಳ ನಡುವೆ ವೈರತ್ವ ತರುತ್ತಿದೆ ಎಂದು ಪತ್ರದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 
ಆಶಾ ಪಟೇಲ್ ಅವರು ಮೆಹ್ಸಾನಾ ಜಿಲ್ಲೆಯ ಉಂಝಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಮೋದಿ ಅವರ ಹುಟ್ಟೂರಾದ ವಡನಗರವು ಇದೇ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 2017ರಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು.
ಶನಿವಾರ ರಾಜ್ಯಪಾಲರಿಗೆ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದು ರಾಜ್ಯಪಾಲರು ರಾಜಿನಾಮೆಯನ್ನು ಅಂಗೀಕರಿಸಿದ್ದು ಶೀಘ್ರವೇ ಬಿಜೆಪಿ ಸೇರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಾತಿಗಣತಿ ಸಮೀಕ್ಷೆ 2025: ಸಚಿವರಲ್ಲಿಯೇ ಭಿನ್ನಮತ ಸ್ಫೋಟ, ಸಿಎಂ ಸಮ್ಮುಖದಲ್ಲೇ ನಾಯಕರ ಆಕ್ಷೇಪ

Chabahar port: ಇರಾನ್‌ನ ಚಬಹಾರ್ ಬಂದರು, 'ನಿರ್ಬಂಧ ವಿನಾಯಿತಿ ರದ್ದು'ಗೊಳಿಸಿದ ಅಮೆರಿಕ, ಭಾರತಕ್ಕೆ ಮತ್ತೊಂದು ಹೊಡೆತ!

Trump softened: ರಾಗ ಬದಲಿಸಿದ ಡೊನಾಲ್ಡ್ ಟ್ರಂಪ್! ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಒತ್ತಾಯಕ್ಕೆ ಮತ್ತೊಂದು ಕಾರಣ ಬಹಿರಂಗ!

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲಟ್ ಪೇಪರ್ ಬಳಕೆ: ನಿಯಮ‌ ತಿದ್ದುಪಡಿಗೆ ಶುರುವಾಯ್ತು ಗೊಂದಲ, ಸುಗ್ರೀವಾಜ್ಞೆ ಅನುಮಾನ..!

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತಗಳ್ಳತನ ಮೂಲಕ ವ್ಯವಸ್ಥಿತವಾಗಿ ಬುಡಮೇಲುಗೊಳಿಸಲಾಗುತ್ತಿದೆ: ಸಿದ್ದರಾಮಯ್ಯ

SCROLL FOR NEXT