ದೇಶ

ಜಾರ್ಖಂಡ್: ರಕ್ತ ನೀಡಿ ಎನ್ ಕೌಂಟರ್ ನಲ್ಲಿ ಗಾಯಗೊಂಡ ನಕ್ಸಲ್ ಜೀವ ಉಳಿಸಿದ ಯೋಧ!

Raghavendra Adiga
ರಾಂಚಿ: ನಕ್ಸಲ್ ಓರ್ವನಿಗೆ ರಕ್ತದಾನ ಮಾಡಿ ಜೀವ ಉಳಿಸುವ ಮೂಲಕ ಸಿಆರ್ ಪಿಎಫ್ ಯೋಧನೊಬ್ಬ ಮಾನವೀಯತೆ ಮೆರೆದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಸಿಆರ್ ಪಿಎಫ್ 133 ಬೆಟಾಲಿಯನ್ ಯೋಧ ರಾಜ್ ಕಮಲ್ ನಕ್ಸಲ್ ವಿರೋಧಿ ಘಟಕ ಕೋಬ್ರಾ ನಡೆಸಿದ್ದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ನಕ್ಸಲ್ ನಿಗೆ ರಕ್ತ ನೀಡಿ ಜೀವ ಕಾಪಾಡಿದ್ದಾರೆ.
ಜಾರ್ಖಂಡ್ ನ ಖುಂತಿ ಹಾಗೂ ವೆಸ್ಟ್ ಸಿಂಗ್ ಭೂಮ್ ಜಿಲ್ಲಾ ಗಡಿಯಲಿ 209 ಕೋಬ್ರಾ ಪಡೆ ಜನವರಿ 29ರೆಂದು ನಡೆಸಿದ್ದ ಎನ್ ಕೌಂಟರ್ ನಲ್ಲಿ ಈ ನಕ್ಸಲ್ ಗೆ ಗಾಯವಾಗಿತ್ತು.ಆ ವೇಳೆ ಭದ್ರತಾ ಪಡೆಯ ಯೋಧರೇ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಎನ್ ಕೌಂಟರ್ ವೇಳೆ ಐವರು ನಕ್ಸಲರು ಸತ್ತಿದ್ದರೆ ಇಬ್ಬರು ನಕ್ಸಲರು ಗಾಯಗೊಂಡಿದ್ದರು.ಎರಡು ಎಕೆ 47, ಎರಡು 303 ರೈಫಲ್ಸ್, ಐದು ಪಿಸ್ತೂಲ್ ಗಳನ್ನು ಭದ್ರತಾ ಪಡೆ ವಶಕ್ಕೆ ಪಡೆದಿತ್ತು.
"ಸೋಮವಾರ ನನಗೆ ಆಸ್ಪತ್ರೆಯಿಂದ ಕರೆ ಬಂದಿತ್ತು. ನಕ್ಸಲ್ ಗೆ ಬಿ ಪಸಿಟಿವ್ ಗುಂಪಿನ ರಕ್ತದ ಅವಶ್ಯಕತೆ ಇದೆ ಎನ್ನಲಾಗಿತ್ತು. ಆಗ ನಮ್ಮ ಕಾನ್ಸ್ಟೇಬಲ್ ರಾಜ್ ಕಮಲ್ ಸ್ವಯಂಪ್ರೇರಣೆಯಿಂದ ರಕ್ತ ನೀಡಿದ್ದಾರೆ" ಜಾರ್ಖಂಡ್ ವಲಯ ಸಿಆರ್ ಪಿಎಫ್ ಐಜಿಪಿ ಸಂಜಯ್ ಆನಂದಂ ಲತ್ಕರ್ ಹೇಳಿದ್ದಾರೆ.
SCROLL FOR NEXT