ದೇಶ

ಮೋದಿ ವರ್ಸಸ್ ದೀದಿ: 3ನೇ ದಿನಕ್ಕೆ ಕಾಲಿಟ್ಟ ಸಿಎಂ ಧರಣಿ, ವಿಪಕ್ಷ ನಾಯಕರ ಸಾಥ್

Srinivasamurthy VN
ಕೋಲ್ಕತಾ: ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನಡೆಸುತ್ತಿರುವ ಅಹೋರಾತ್ರಿ ಧರಣಿ 2ನೇ ದಿನಕ್ಕೆ ಕಾಲಿಟ್ಟಿದ್ದು, ದೀದಿ ಧರಣಿಗೆ ಪ್ರತಿಪಕ್ಷ ನಾಯಕರುಗಳು ಸಾಥ್ ನೀಡಿದ್ದಾರೆ.
ನಿನ್ನೆ ರಾತ್ರಿ ಡಿಎಂಕೆ ಮುಖಂಡೆ ಕನ್ನಿಮೋಳಿ ಹಾಗೂ ಆರ್ ಜೆಡಿ ಮುಖಂಡ ತೇಜಸ್ವಿಯಾದವ್ ಕೋಲ್ಕತಾಗೆ ತೆರಳಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಅವರೊಂದಿಗೆ ಧರಣಿಯಲ್ಲಿ ಪಾಲ್ಗೊಂಡರು. ಅಂತೆಯೇ ಇಂದು ವಿವಿಧ ಪಕ್ಷಗಳ ಇತರೆ ನಾಯಕರೂ ಕೂಡ ಮಮತಾಗೆ ಸಾಥ್ ನೀಡುವ ಸಾಧ್ಯತೆ ಇದೆ.
ಇನ್ನು ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ ನೀವು ಟಿಎಂಸಿ ಕಾರ್ಯಕರ್ತರನ್ನು ಥಳಿಸಿದಾಗ ನಾನು ಬೀದಿಗಿಳಿದು ಹೋರಾಟ ಮಾಡಿರಲಿಲ್ಲ. ಆದರೆ ಕೋಲ್ಕತಾ ಪೊಲೀಸ್ ಇಲಾಖೆಗೆ ಅವಮಾನ ಮಾಡಲು ಯತ್ನಿಸಿದಾಗ ಓರ್ವ ಸಿಎಂ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಇಲಾಖೆಯ ಘನತೆ ಗೌರವ ಎತ್ತಿಹಿಡಿಯುವುದು ಈ ರಾಜ್ಯದ ಪ್ರತೀಯೊಬ್ಬ ನಾಗರೀಕನ ಕರ್ತವ್ಯ ಎಂದು ಮಮತಾ ಹೇಳಿದರು.
SCROLL FOR NEXT