ಬೆಂಗಳೂರಿನಲ್ಲಿ ವಾಯುಪಡೆ, ವಿಮಾನ ಅವಘಡ: ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆ 
ದೇಶ

ಬೆಂಗಳೂರಿನಲ್ಲಿ ವಾಯುಪಡೆ ವಿಮಾನ ಅವಘಡ: ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆ

ಇತ್ತೀಚೆಗೆ ಭಾರತೀಯ ವಾಯುಪಡೆ ವಿಮಾನವೊಂದು ಬೆಂಗಳೂರಿನ ಎಚ್.ಎ.ಎಲ್ ನಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದರು. ಇದಾದ ಬಳಿಕ ಈಗ ಭವಿಷ್ಯ....

ನವದೆಹಲಿ: ಇತ್ತೀಚೆಗೆ ಭಾರತೀಯ ವಾಯುಪಡೆ ವಿಮಾನವೊಂದು ಬೆಂಗಳೂರಿನ ಎಚ್.ಎ.ಎಲ್ ನಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದರು. ಇದಾದ ಬಳಿಕ ಈಗ ಭವಿಷ್ಯದಲ್ಲಿ ಅಂತಹಾ ಅವಘಡಗಳಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ನಿರ್ದೇಶನವನ್ನು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಭಾರತೀಯ ವಾಯುಪಡೆಗೆ ಸೇರಿದ್ದ ಮಿರಾಜ್ -2000 ತರಬೇತಿನಿರತ ವಿಮಾನ ಫೆಬ್ರವರಿ 1 ರಂದು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದ ಬಳಿಕ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಮಿರಾಜ್  ಅಪಘಾತದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಭಾರತೀಯ ರಕ್ಷಣಾ ಸೇವೆಗಳ ಪರಿಣತರು ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು ಸ್ಥಾಪಿಸಬೇಕೆಂದು ಪಿಐಎಲ್ ನಲ್ಲಿ ಕೋರಲಾಗಿದೆ.
ಅಲಾಕ್ ಅಲೋಕ್ ಶ್ರೀವಾಸ್ತವ  ಎಂಬ ವಕೀಲರು ಈ ಪಿಐಎಲ್ ಸಲ್ಲಿಸಿದ್ದಾರೆ.ಅಂತಹ ಘಟನೆಗಳಿಗೆ ಕಾರಣವಾಗುವ ಲೋಪಗಳನ್ನು ಗಮನಿಸದ ಸರ್ಕಾರಿ ಅಧಿಕಾರಿಗಳು ಮತ್ತು ಇತರರ  ವಿರುದ್ಧ ಸಮಿತಿ ಕ್ರ್ಮ ತೆಗೆದುಕೊಳ್ಳಬೇಕು.ಭವಿಷ್ಯದಲ್ಲಿ ಮತ್ತೆ ಇಂತಹಾ ಘಟನೆ ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಸೂಚಿಸಬೇಕು ಎಂದು ಅವರು ಕೇಳಿದ್ದಾರೆ.
2015-16ರ ಸಾಲಿನ್ಬಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದ  35 ವಿಮಾನ ಮತ್ತು ಹೆಲಿಕಾಪ್ಟರ್ ಗಳು ಅಪಘಾತಕ್ಕೀಡಾಗಿದೆ.ಇದರಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಇತ್ತೀಚಿನ ಮಾದ್ಯಮ ಅವರದಿಯನ್ನು ಆಧಾರವಾಗಿಟ್ಟು ವಿವರಿಸಿದ್ದಾರೆ. 2011 ರಿಂದಲೂ, ಭಾರತೀಯ ವಾಯುಪಡೆ, ಸೈನ್ಯ ಮತ್ತು ನೌಕಾಪಡೆಯು ಸುಮಾರು 75 ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಅಪಘಾತಕ್ಕೀಡಾಗಿವೆ.ಇದರಲ್ಲಿ ಸುಮಾರು 80 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
"ಇತ್ತೀಚೆಗೆ ಭಾರತೀಯ ಸೇನಾಪಡೆಗಳಿಗೆ ಸೇರಿದ ವಿವಿಧ ವಿಮಾನಗಳ ಮತ್ತು ಹೆಲಿಕಾಪ್ಟರ್ಗಳ ಭೀಕರ ಅಪಘಾತಕ್ಕೀಡಾಗುತ್ತಿದೆ.ಈ ವೇಳೆ ಹಲವು ಯೋಧರ ಅಮೂಲ್ಯ ಜೀವ ಹೋಗಿದೆ."ಶ್ರೀವಾಸ್ತವ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT