ಮಮತಾ ಜತೆ ಧರಣಿ: ಪೋಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಕೇಂದ್ರ ಸೂಚನೆ
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೋಲ್ಕತಾದಲ್ಲಿ ಫೆ 4ರಂದು ನಡೆಸಿದ ಧರಣಿಗೆ ಸಾಥ್ ನೀಡಿದ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಅಖಿಲ ಭಾರತ ಸೇವಾ ನಿಯಮದಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಡಿಜಿಪಿ ವೀರೇಂದ್ರ, ಎಡಿಜಿ(ಭದ್ರತೆ) ವಿನೀತ್ ಕುಮಾರ್, ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಂಜು ಶರ್ಮಾ, ಬಿಧಾನ್ ನಗರದ ಆಯುಕ್ತ ಗ್ಯಾನ್ವಂತ್ ಸಿಂಗ್ ಮತ್ತು ಹೆಚ್ಚುವರಿ ಆಯುಕ್ತ ಸುಪ್ರತಿಮ್ ಸರ್ಕಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಗೃಹ ಸಚಿವಾಲಯ ತಿಳಿಸಿದೆ.
ಪದಕಗಳ ಹಿಂಪಡೆತ, ಸೇವಾ ಪ್ರಶಂಸೆಗಳನ್ನೂ ಹಿಂಪಡೆಯಲು ನಿರ್ಧರಿಸಿರುವುದಲ್ಲದೆ ನಿರ್ಧಿಷ್ಟ ಅವಧಿಗಾಗಿ ಅವರನ್ನು ಸೇವೆಯಿಂದ ನಿರ್ಬಂಧಿಸಲೂ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗೂ ಸಮವಸ್ತ್ರದಲ್ಲಿರುವ ಸಂದರ್ಭದಲ್ಲಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಎಲ್ಲ ರಾಜ್ಯಗಳ ಅಧಿಕಾರಿಗಳಿಗೂ ಸಲಹೆ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics