ಗಂಗಾಧರ್ 
ದೇಶ

ಬಿಇಎಲ್ ನಲ್ಲಿ ಕೆಲ್ಸ ಕೊಡಿಸುವುದಾಗಿ ಹೇಳಿ 76 ಮಂದಿಗೆ ಪಂಗನಾಮ, 1 ಕೋಟಿ ರು. ವಂಚನೆ

ವ್ಯಕ್ತಿಯೊಬ್ಬ ಉದ್ಯೋಗ ಆಕಾಂಕ್ಷಿಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 76 ಮಂದಿಗೆ ಪಂಗನಾಮ ಹಾಕಿದ್ದಾರೆ.

ಬೆಂಗಳೂರು: ವ್ಯಕ್ತಿಯೊಬ್ಬ ಉದ್ಯೋಗ ಆಕಾಂಕ್ಷಿಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 76 ಮಂದಿಗೆ ಪಂಗನಾಮ ಹಾಕಿದ್ದಾರೆ.
ನಯಾಜ್ ಪಾಷಾ ಎಂಬ ವ್ಯಕ್ತಿ ತಾನು ಬಿಇಎಲ್ ಉದ್ಯೋಗಿಯಾಗಿದ್ದು, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ತನಗೆ ಗೊತ್ತು. 5 ಲಕ್ಷ ರುಪಾಯಿ ಕೊಟ್ಟರೆ ಕೆಲಸ ಕೊಡಿಸುತ್ತೇನೆ. ಮೊದಲು ಲಿಸ್ಟ್ ನಲ್ಲಿ ನಿಮ್ಮ ಹೆಸರು ಅನೌನ್ಸ್ ಆದಾಗ 1.50 ಲಕ್ಷ ಕೊಡಿ. ನೇಮಕಾತಿ ಬಳಿಕ ಬಾಕಿ ಹಣ ನೀಡುವಂತೆ ಹೇಳಿದ್ದಾನೆ. ಇತ್ತ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಜನ ಹಣ ಕೊಟ್ಟಿದ್ದಾರೆ. ಹಣ ಸಿಕ್ಕಿದ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.
ವಾಟ್ಸಪ್ ಮೂಲಕ ಬಿಇಎಲ್ ಫ್ಯಾಕ್ಟರಿಯ ಲೇಟರ್ ಹೇಡ್‍ನಲ್ಲಿ ನಕಲಿ ಲಿಸ್ಟ್ ತೋರಿಸಿ 2018 ನವಂಬರ್ 8ಕ್ಕೆ ಸಂದರ್ಶನಕ್ಕೆ ಅಪಾಯಿಂಟ್ ಮೆಂಟ್ ಸಿಕ್ಕಿದೆ ಎಂದು ಹಣ ಪಡೆದಿದ್ದಾನೆ. ಬಳಿಕ ನಯಾಜ್ ಮಹಿಳೆಯೊಬ್ಬಳಿಂದ ಕರೆ ಮಾಡಿಸಿ ಸಂದರ್ಶನದ ದಿನಾಂಕವನ್ನು 2019 ಜನವರಿ 29ಕ್ಕೆ ಮುಂದೂಡಲಾಗಿದೆ ಎಂದು ಸುಳ್ಳು ಹೇಳಿಸಿದ್ದನು. ನಂತರ ಜನವರಿ 28ಕ್ಕೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಹಣ ಕಳೆದುಕೊಂಡ ಗಂಗಾಧರ್ ಹೇಳಿದ್ದಾರೆ.
ಈ ಬಗ್ಗೆ ಅನುಮಾನ ಬಂದು ಬಿಇಎಲ್ ಫ್ಯಾಕ್ಟರಿ ಎಂಡಿ ಅವರನ್ನ ಸಂಪರ್ಕಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಇನ್ನೂ ನಯಾಜ್ ಇದುವರೆಗೂ 76 ಜನರಿಂದ ಸುಮಾರು 1 ಕೋಟಿ ರುಪಾಯಿ ಹಣ ಪೀಕಿದ್ದಾನೆ.
ಈ ಸಂಬಂಧ ವಂಚನೆಗೊಳಗಾದವರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ: ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ತಂದೆ-ಮಗನ ವಿರುದ್ಧ ಪ್ರಕರಣ ದಾಖಲು

SCROLL FOR NEXT