ಮಹಿಂದಾ ರಾಜಪಕ್ಸ 
ದೇಶ

ನಾಳೆ ಬೆಂಗಳೂರಿಗೆ ಶ್ರೀಲಂಕಾ ಪ್ರತಿಪಕ್ಷ ನಾಯಕ ಮಹಿಂದಾ ರಾಜಪಕ್ಸ

ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಮಹಿಂದಾ ರಾಜಪಕ್ಸ ಶುಕ್ರವಾರ ಸಂಜೆ ರಾಜಪಕ್ಸಆಗಮಿಸಲಿದ್ದಾರೆ

ಕೊಲಂಬೋ: ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಮಹಿಂದಾ ರಾಜಪಕ್ಸ ಶುಕ್ರವಾರ ಸಂಜೆ ಭಾರತಕ್ಕೆ ಆಗಮಿಸಲಿದ್ದಾರೆ.ಈ ಸಂದರ್ಭದಲ್ಲಿ ಅವರು ಭವಿಷ್ಯದಲ್ಲಿ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಸುಧಾರಣೆಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಅವರ ಕಛೇರಿ ಮೂಲಗಳು ಹೇಳಿದೆ.
ಕಳೆದ ತಿಂಗಳು ಪ್ರತಿಪಕ್ಷ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದು ರಾಜಪಕ್ಸಅವರ ಮೊದಲ ವಿದೇಶ ಪ್ರವಾಸವಾಗಿದೆ.
ಆಂಗ್ಲ ಪತ್ರಿಕೆ "ದಿ ಹಿಂದೂ" ಬೆಂಗಳೂರಿನಲ್ಲಿ  ಫೆಬ್ರವರಿ9-10ರಂದು ಆಯೋಜಿಸಿರುವ ಕಾರ್ಯಕ್ರಮಕ್ಕೆ ರಾಜಪಕ್ಸ ಹಾಜರಾಗಲಿದ್ದಾರೆ.ಈ ಕಾರ್ಯಕ್ರಮದ ಉದ್ಘಾಟನೆಗೆ ಅವರನ್ನು ಆಹ್ವಾನಿಸಲಾಗಿದ್ದು ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಅಲ್ಲಿ ಅವರು ಭಾರತ ಮತ್ತು ಶ್ರೀಲಂಕಾ ನಡುವಿನ ಭವಿಷ್ಯದ ಸಂಬಂಧಗಳ ಕುರಿತು ಮಾತನಾಡುವ ಸಾಧ್ಯತೆ ಇದೆ.
ಇದೇ ಕಾರ್ಯಕ್ರಮದ ಎರಡನೇ ದಿನ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ.
ಈ ವೇಳೆ ರಾಜಪಕ್ಸ ದೇಶದ ಗಣ್ಯರೊಡನೆ ಭೇಟಿ ಮಾಡಲಿದ್ದಾರೆ. ಇದು ಕಳೆದ ಆರು ತಿಂಗಳಲ್ಲಿ ಅವರ ಎರಡನೇ ಭಾರತ ಭೇಟಿಯಾಗಿದೆ.ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ  ಅವರು ದೆಹಲಿಗೆ ಭೇಟಿ ನೀಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಮತ್ತೆ ಅಕ್ಟೋಬರ್ ವೇಳೆಗೆ ದ್ವೀಪರಾಷ್ಟ್ರದಲ್ಲಿ ಉಂಟಾದ ರಾಜಕೀಯ ವಿಪ್ಲವದ ಕಾರಣ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT