ದೇಶ

ಚಿಟ್ ಫಂಡ್ ಹಗರಣದ ತನಿಖೆ: ಕೋಲ್ಕತ್ತಾ ಪೊಲೀಸ್ ಅಧಿಕಾರಿ- ಟಿಎಂಸಿ ಸಂಸದನ ಮುಖಾಮುಖಿ

Srinivas Rao BV
ಕೋಲ್ಕತ್ತಾ: ರೋಸ್ ವ್ಯಾಲಿ ಹಗರಣ, ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು  ವಿಚಾರಣೆ ನಡೆಸಿದ್ದಾರೆ.
ಟಿಎಂಸಿ ಸಂಸದ ಕುನಾಲ್ ಘೋಷ್ ಅವರನ್ನೂ ಸಹ 11 ಗಂಟೆಗಳ ವಿಚಾರಣೆ ನಡೆಸಿದ್ದು, ಟಿಎಂಸಿ ಸಂಸದ ಹಾಗೂ ಪೊಲೀಸ್ ಅಧಿಕಾರಿ ವಿಚಾರಣೆ ವೇಳೆ ಮುಖಾಮುಖಿಯಾಗಿದ್ದಾರೆ. ಇಬ್ಬರಿಗೂ ಸಹ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಸೂಚಿಸಿದ್ದಾರೆ. 
ಮೂಲಗಳ ಪ್ರಕಾರ ಎರಡನೇ ಸುತ್ತಿನ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳು ಹಾಗೂ ಟಿಎಂಸಿ ಸಂಸದನನ್ನು ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಎರಡೂ ಹಗರಣಕ್ಕೆ ಸಂಬಂಧಿಸಿದಂತೆ ಶಿಲ್ಲಾಂಗ್ ನ ಸಿಬಿಐ ಕಚೇರಿ ಎದುರು ಹಾಜರಾಗುವಂತೆ ಪೊಲೀಸ್ ಅಧಿಕಾರಿ ಹಾಗೂ ಟಿಎಂಸಿ ಸಂಸದನಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
SCROLL FOR NEXT