ದೇಶ

ಕಾಂಗ್ರೆಸ್ ಸರ್ಕಾರದ ಅವಧಿಯ ಒಪ್ಪಂದದ ಅನ್ವಯವೇ ರಾಫೆಲ್ ಯುದ್ಧ ವಿಮಾನ ಖರೀದಿ!

Srinivasamurthy VN
ನವದೆಹಲಿ: ಭಾರಿ ವಿವಾದಕ್ಕೆ ಕಾರಣವಾಗಿರುವ ರಾಫೆಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಹೊಸ ಟ್ವಿಟ್ ದೊರೆತಿದ್ದು, ಹಾಲಿ ಎನ್ ಡಿಎ ಸರ್ಕಾರ ಈ ಹಿಂದಿನ ಯುಪಿಎ ಸರ್ಕಾರ ಅವಧಿಯಲ್ಲಿನ ಒಪ್ಪಂದದ ಅನ್ವಯವೇ ಯುದ್ಧ ವಿಮಾನ ಖರೀದಿ ಮಾಡಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವತಃ ಯುಪಿಎ ಅವಧಿಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳೇ ಮಾಹಿತಿ ನೀಡಿದ್ದು, ರಾಫೆಲ್ ಯುದ್ಧ ವಿಮಾನಗಳನ್ನು ಈ ಹಿಂದಿನ 2013ರ ಒಪ್ಪಂದದ ಅನ್ವಯವೇ ಖರೀದಿ ಮಾಡಲಾಗಿದೆ ಎಂದು ಹೇಳಿದ್ದಾರೆ. 2013ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಂದಿನ ರಕ್ಷಣಾ ಸಚಿವ ಎಕೆ ಆ್ಯಂಟನಿ ಅವರ ನೇತೃತ್ವದಲ್ಲಿ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಮೂಲ ಒಪ್ಪಂದದ ಅನ್ವಯವೇ ಯುದ್ಧ ವಿಮಾನ ಖರೀದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೆ ಇದೊಂದು ಅಂತರ್ ಸರ್ಕಾರೀ ಒಪ್ಪಂದವಾಗಿದ್ದು, ಖಾಸಗಿ ಒಪ್ಪಂದವಲ್ಲ. ಫ್ರಾನ್ಸ್ ಸರ್ಕಾರದೊದಿಗಿನ ಒಪ್ಪಂದದ ಅನ್ವಯವೇ ಡಸ್ಸಾಲ್ಟ್ ಏವಿಯೇಷನ್ ನೊಂದಿಗೆ ಯುದ್ಧ ವಿಮಾನ ಖರೀದಿ ನಡೆಸಲಾಗಿದೆ. ಸ್ನೇಹಿತ ರಾಷ್ಟ್ರಗಳ ನಡುವಿನ ಒಪ್ಪಂದವಾದ್ದರಿಂದ ಸ್ಪರ್ಧಾತ್ಮಕ ಹಣಕಾಸು ಪ್ರಾಧಿಕಾರ (CFA-Competent Financial Authority) ನಿಯಮಾವಳಿಗಳ ಅನ್ವಯವೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂತೆಯೇ ಸ್ನೇಹಿತ ರಾಷ್ಟ್ರಗಳಾದ್ದರಿಂದ ಒಪ್ಪಂದದಲ್ಲಿ ಕೆಲ ವಿನಾಯಿತಿ ಕೂಡ ನೀಡಬೇಕಾಗುತ್ತದೆ ಎಂದೂ ಹೇಳಿದ್ದಾರೆ.
ಅಂತೆಯೇ ಮಾಧ್ಯಮಗಳಲ್ಲಿನ ವರದಿಗಳನ್ನು ಅಲ್ಲ ಗಳೆದಿರುವ ಅಧಿಕಾರಿಗಳು, ಮೂಲ ಒಪ್ಪಂದದಂತೆ ಖರೀದಿ ಪ್ರಕ್ರಿಯೆ ನಡೆದಿದ್ದು, ಯಾವುದೇ ರೀತಿಯ ನಿಯಮಾವಳಿಗಳನ್ನೂ ಗಾಳಿಗೆ ತೂರಿಲ್ಲ. ಭ್ರಷ್ಟಾಚಾರ ನಿಗ್ರಹ ಅಂಶ ಖಾಸಗಿ ಸಂಸ್ಥೆಳೊಂದಿಗಿನ ಒಪ್ಪಂದಗಳಿಗೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
SCROLL FOR NEXT