ದೇಶ

ರಾಫೆಲ್ ಒಪ್ಪಂದ: ಸಿಎಜಿ ವರದಿಯನ್ನು ಸಂಸತ್ ನಲ್ಲಿ ಮಂಡಿಸಲಿರುವ ಕೇಂದ್ರ ಸರ್ಕಾರ

Srinivas Rao BV
ನವದೆಹಲಿ: ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರಾಫೆಲ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ಸಿಎಜಿ ವರದಿಯನ್ನು ಕೇಂದ್ರ ಸರ್ಕಾರ ಫೆ.12 ರಂದು ಸಂಸತ್ ನಲ್ಲಿ ಮಂಡಿಸುವ ಸಾಧ್ಯತೆಗಳಿವೆ.
ರಾಫೆಲ್ ಜೆಟ್ ಖರೀದಿ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು  ಕಾಂಗ್ರೆಸ್ ಆರೋಪಿಸುತ್ತಿದ್ದು, ಈ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಪ್ರಸಕ್ತ ಸಂಸತ್ ಅಧಿವೇಶನದಲ್ಲೂ ಸಹ ಈ ಬಗ್ಗೆ ಸಾಕಷ್ಟು ಗದ್ದಲ ಉಂಟಾಗಿದ್ದು ಸಂಸತ್ ಅಧಿವೇಶನ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಅಂದರೆ ಫೆ.12 ರಂದು ಸಂಸತ್ ನಲ್ಲಿ ಸಿಎಜಿ ವರದಿಯನ್ನು ಮಂಡಿಸಲಿದೆ ಎಂಬ ನಿರೀಕ್ಷೆ ಇದೆ. 
16 ನೇ ಲೋಕಸಭೆಯ ಕೊನೆಯ ಅಧಿವೇಶನ ಇದಾಗಿರಲಿದ್ದು, ಕೊನೆಯ ಅಧಿವೇಶನ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಮೋದಿ ಸರ್ಕಾರ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿ ಮಂಡಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಸಿಎಜಿ ವರದಿ ಮಂಡನೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಒಪ್ಪಂದ ನಡೆದಾ ಈಗ ಸಿಎಜಿ ಆಗಿರುವ ರಾಜೀವ್ ಮೆಹರ್ಷಿ ಆಗಿನ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳಾಗಿದ್ದರು. ಒಪ್ಪಂದದ ವೇಳೆ ಆಗ ಅವರ ಪಾತ್ರ ಇದ್ದಿದ್ದರಿಂದ ಈಗಿನ ಸಿಎಜಿ ವರದಿ ಹಿತಾಸಕ್ತಿಯ ಸಂಘರ್ಷಕ್ಕೀಡಾಗಲಿದ್ದು ಸತ್ಯ ಮರೆಮಾಚುವ ಸಾಧ್ಯತೆಗಳಿವೆ ಎಂದು ತಗಾದೆ ತೆಗೆದಿದೆ.
SCROLL FOR NEXT