ದೇಶ

ಸಿಗ್ ಸಾಯರ್ ರೈಫಲ್ಸ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

Srinivas Rao BV
ಚೀನಾ  ಗಡಿ ಪ್ರದೇಶದಲ್ಲಿ  ಸುಮಾರು 3 ಸಾವಿರದ 600 ಕೀ. ಮೀ. ದೂರದವರೆಗೂ ನಿಯೋಜಿಸಲ್ಪಟ್ಟ ಸೈನಿಕರ ಬಳಕೆಗಾಗಿ ಸಿಗ್ ಸಾಯರ್ ರೈಫಲ್ಸ್  ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. 
ಫಾಸ್ಟ್ ಟ್ರ್ಯಾಕ್ ಪ್ರಕ್ರಿಯೆಯ ಮೂಲಕ 72,000 ರೈಫಲ್ಸ್ ಗಳನ್ನು ಖರೀದಿಸಲು ಭಾರತ ಅಮೆರಿಕದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಸ್ತುತ ಈ ಮಾದರಿಯ ರೈಫಲ್ ಗಳನ್ನು ಅಮೆರಿಕ ಪಡೆಗಳು ಬಳಕೆ ಮಾಡುತ್ತಿದ್ದು, ಒಪ್ಪಂದ ಮಾಡಿಕೊಂಡಿರುವ ದಿನಾಂಕದಿಂದ ಒಂದು ವರ್ಷದೊಳಗಾಗಿ ರೈಫಲ್ ಗಳನ್ನು ಸಂಸ್ಥೆ ಭಾರತಕ್ಕೆ ಪೂರೈಕೆ ಮಾಡಬೇಕಿದೆ ಎಂದು ಒಪ್ಪಂದ ಭಾಗವಾಗಿದ್ದ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಮುಂದಿನ ವಾರ ಒಪ್ಪಂದದ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಈಗ ಖರೀದಿ ಮಾಡಲಾಗುತ್ತಿರುವ ರೈಫಲ್ ಗಳು ಭಾರತದಲ್ಲಿ ಈಗ ಬಳಕೆ ಮಾಡಲಾಗುತ್ತಿರುವ ಐಎನ್ಎಸ್ಎಸ್ ರೈಫಲ್ ಗಳ ಬದಲಿಗೆ ಬಳಕೆಯಾಗಲಿವೆ. 
SCROLL FOR NEXT