ದೇಶ

ಚುನಾವಣೆ ವೇಳೆ ಬೇರೆ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದರೆ ನಾವೂ ಸ್ವಂತ ಬಲದಿಂದ ಎದುರಿಸುತ್ತೇವೆ: ಎಐಎಡಿಎಂಕೆ

Raghavendra Adiga
ಚೆನ್ನೈ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ತನ್ನ ಸಮಾನ ಮನಸ್ಕರೊಡನೆ ಸೇರಿ ಮೈತ್ರಿಕೂಟ ಬಲವರ್ಧನೆ ಮಾಡಿಕೊಳ್ಳುವತ್ತ ಯೋಜಿಸಿದ್ದರೆ ಇದಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿನ ಆಡಳಿತಾರೂಢ ಪಕ್ಷ ಎಐಎಡಿಎಂಕೆ . ತಮಿಳುನಾಡಿನಲ್ಲಿ ಇತರ ಪಕ್ಷಗಳನ್ನು ಹೋಲಿಸಿದರೆ ತಾವು ಬಲವಾಗಿದ್ದೇವೆ.ಹಾಗಾಗಿ ನಾವು ಯಾವುದೇ ಮೈತ್ರಿಕೂಟಕ್ಕೆ ಸೇರದೆ ಏಕಾಂಗಿಯಾಗಿಯೇ ಸ್ಪರ್ಧಿಸಲಿದ್ದೇವೆ ಎಂದು ಹೇಳಿದೆ.
ಜಯಲಲಿತಾ ಅವರ ನಿಧನದ ಬಳಿಕ ಇದು ಮೊದಲ ಲೋಕಸಭೆ ಚುನಾವಣೆಯಾಗಿದ್ದು ಕಾಂಗ್ರೆಸ್ ಗೆ ಬೆಂಬಲ ನೀಡುವಂತೆ ಆ ಪಕ್ಷದ ನಾಯಕರು ಎಐಎಡಿಎಂಕೆಗೆ ಕೇಳಿದ ಬೆನ್ನಲ್ಲೇ ತಮಿಳುನಾಡಿನ ಉಪಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂಈ ಪ್ರತಿಕ್ರಿಯೆ ನೀಡಿದ್ದಾರೆ.
ಬಜೆಟ್ ಚರ್ಚೆಯ ಸಂದರ್ಭದಲ್ಲಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ನಾಯಕ ಕೆ.ಆರ್.ರಾಮಸಾಮಿಮಾತನಾಡಿ, ಎಐಎಡಿಎಂಕೆ ಮೈತ್ರಿಕೂಟಗಳಿಲ್ಲದೆ ಚುನಾವಣೆ ಎದುರಿಸುವುದರ ಮೂಲಕ ತನ್ನ ಶಕ್ತಿಯನ್ನು ಸಾಬೀತು ಪಡಿಸಬೇಕೆಂದು ಹೇಳಿದೆ. ಆದರೆ ಪಕ್ಷದ ಮುಖ್ಂಡರಾಗಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನದ ಬಳಿಕ ಇದುವರೆಗೆ ಪಕ್ಷ ಯಾವುದೇ ಪ್ರಮುಖ ಚುನಾವಣೆ ಎದುರಿಸಿಲ್ಲ ಎಂದಿದ್ದಾರೆ.
2016ರ ಡಿಸೆಂಬರ್ ನಲ್ಲಿ ಜಯಲಲಿತಾ ನಿಧನರಾದ ಬಳಿಕ ಪಕ್ಷದಲ್ಲಿ ದೊಡ್ಡ ಮಟ್ಟದ ನಾಯಕತ್ವದ ಕೊರತೆಯುಂಟಾಗಿದ್ದು ಇದುವರೆಗೆ "ಅಮ್ಮ"ನ ಸಾವಿನಿಂದ ಉಂಟಾಗಿರುವ ಖಾಲಿ ಸ್ಥಳವನ್ನು ತುಂಬಿಸಲು ಸಾಧ್ಯವಾಗಿಲ್ಲ. ಅಲ್ಲದೆ ಪಕ್ಷವು ಬಿಜೆಪಿ ಮೈತ್ರಿಕೂಟ ಸೇರಲು ಸಹ ಕೆಲವು ಸಮಸ್ಯೆಗಳಿದೆ ಎನ್ನುವುದನ್ನು ಪನ್ನೀರ್ ಸೆಲ್ವಂ ಒಪ್ಪಿಕೊಂಡಿದ್ದಾರೆ.
1967ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿದ್ದ ಡಿಎಂಕೆ ಸಂಸ್ಥಾಪಕ ದಿವಂಗತ ಸಿಎನ್. ಅಣ್ಣಾದೊರೈ ಅವರಿಂದ ಮುಂದೆಂದೂ ಕಾಂಗ್ರೆಸ್ ಈ ರಾಜ್ಯದಲ್ಲಿ ಬಹುಮತ ಪಡೆಯದಂತಹಾ ಸ್ಥಿತಿ ಎದುರಿಸಿದೆ. ಅಲ್ಲದೆ ಡಿಎಂಕೆ ಅಥವಾ ಅಣ್ಣಾ ಡಿಎಂಕೆ ಈ ಎರಡೂ ಪಕ್ಷಗಳು ಒಂದರ ಬೆನ್ನಿಗೊಂದು ಚುನಾವಣೆ ಗೆಲ್ಲುತ್ತಾ ಪರ್ಯಾಯವಾಗಿ ಅಧಿಕಾರಕ್ಕೇರಿದೆ. ಎಐಎಡಿಎಂಕೆ ಹಿಂದಿನ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟಗಳಿಲ್ಲದೆ ಚುನಾವಣೆ ಎದುರಿಸುವುದರ ಮೂಲಕ ಸಂಪೂರ್ಣ ಬಹುಮತವನ್ನು ಸಾಧಿಸಿದೆ ಎಂದು ಶಿಕ್ಷಣ ಸಚಿವ  ಕೆ.ಎ. ಸೆಂಕೋಟೈಯ್ಯನ್ ಹೇಳಿದ್ದಾರೆ.
ಇತರೆ ಪಕ್ಷಗಳು ಯಾವುದೇ ಮೈತ್ರಿ ಇಲ್ಲದೆ ಚುನಾವಣೆ ಎದುರಿಸಿದ್ದಾದರೆ ನಾವೂ ಹಾಗೆಯೇ ಮಾಡಲಿದ್ದೇವೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.ಜಯಲಲಿತಾ ಯುಗದ ನಂತರ ಅವರ ಪಕ್ಷವು ರಾಜ್ಯದಲ್ಲಿ ಬಲವಾದ ಬುನಾದಿ ಹೊಂದಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
SCROLL FOR NEXT