ದೇಶ

ಜಮ್ಮು ಕಾಶ್ಮೀರ ಉಗ್ರ ದಾಳಿ: ಎನ್.ಎಸ್.ಜಿ, ಎನ್ಐಎ ತಂಡಗಳಿಂಡ ತನಿಖೆ

Raghavendra Adiga
ಪುಲ್ವಾಮಾ (ಜಮ್ಮು ಕಾಶ್ಮೀರ): ಪುಲ್ವಾಮಾದಲ್ಲಿ ಫೆ.14 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯ ತ್ರನಿಖೆಗಾಗಿ ಭಯೋತ್ಪಾದನಾ ವಿರೋಧಿ ಕಮಾಂಡೋ ತಜ್ಞರು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಗಳು ರಾಷ್ಟ್ರೀಯ ಇನ್ವೆಸ್ಟಿಗೇಷನ್ ಏಜೆನ್ಸಿಯ ತನಿಖೆ ಅಧಿಕಾರಿಗಳು ಪುಲ್ವಾಮಾಗೆ ಆಗಮಿಸಿದ್ದಾರೆ.
2016ರಲ್ಲಿ ನಡೆದಿದ್ದ ಉರಿ ದಾಳಿಯ ಬಳಿಕ ಜಮ್ಮು ಕಾಶ್ಮೀರದಲ್ಲಿ ನಡೆದ ಅತಿ ಭೀಕರ ಉಗ್ರ ದಾಳಿ ಇದಾಗಿದ್ದು ಒಟ್ಟು 40 ಮಂದಿ ಯೋಧರು ಹುತಾತ್ಮರಾಗಿದ್ದರು.
ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳು, ಎನ್ ಎಸ್ ಜಿಯ ತಜ್ಞರು ದಾಳಿಯ ತನಿಖೆಯಲ್ಲಿ ಸಹಕರಿಸಲಿದ್ದಾರೆ.
ಇದೇ ವೇಳೆ ಪುಲ್ವಾರಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಅವಶೇಷಗಳನ್ನು ಪಡೆಯಲು ಭಾರತೀಯ ವಾಯುಪಡೆಯ ಸಿ -17 ವಿಮಾನಗಳು ಇಂದೋನ್ ನಿಂಡ  ಶ್ರೀನಗರಕ್ಕೆ ತೆರಳಲಿವೆ.
SCROLL FOR NEXT