ಕಮಲ್ ಹಾಸನ್ ಮತ್ತು ಸ್ಟಾಲಿನ್ 
ದೇಶ

ನಾನು ಹರಿದ ಅಂಗಿ ಧರಿಸಿ ನೌಟಂಕಿ ರಾಜಕಾರಣ ಮಾಡುವುದಿಲ್ಲ: ಸ್ಟಾಲಿನ್ ಗೆ ಕಮಲ್ ಹಾಸನ್ ಟಾಂಗ್

ನಾನು ಹರಿದ ಅಂಗಿಯನ್ನು ಧರಿಸುವುದಿಲ್ಲ, ಒಂದುವೇಳೆ ವಿಧಾನಸಭೆಯಲ್ಲಿ ನನ್ನ ಅಂಗಿ ಹರಿದರೂ ತಾನು ಹೊಸ ಅಂಗಿಯನ್ನು ತೊಟ್ಟುಕೊಳ್ಳುವೆ ಎಂದು ಹೇಳುವ ಮೂಲಕ

ಚೆನ್ನೈ: ನಾನು ಹರಿದ ಅಂಗಿಯನ್ನು ಧರಿಸುವುದಿಲ್ಲ, ಒಂದುವೇಳೆ ವಿಧಾನಸಭೆಯಲ್ಲಿ ನನ್ನ ಅಂಗಿ ಹರಿದರೂ ತಾನು ಹೊಸ ಅಂಗಿಯನ್ನು ತೊಟ್ಟುಕೊಳ್ಳುವೆ ಎಂದು ಹೇಳುವ ಮೂಲಕ ಡಿಎಂಕೆ ಮುಖಂಡ ಸ್ಟಾಲಿನ್ ಗೆ  ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಟಾಂಗ್ ನೀಡಿದ್ದಾರೆ. 
ತಮಿಳುನಾಡಿನಲ್ಲಿ ನಾನು ಗ್ರಾಮಸಭಾ ಸಭೆಗಳನ್ನು ಮಾಡಲು ಪ್ರಾರಂಭಿಸಿದ ಮೇಲೆ ಉಳಿದವರೂ ಮಾಡುತ್ತಿದ್ದಾರೆ, ಗ್ರಾಮ ಸಭೆ ಎಂಬುದು ಇಂದು ನಿನ್ನೆಯ ವ್ಯವಸ್ಥೆಯಲ್ಲ ಅದು ಹಿಂದಿನಿಂದಲೂ ಇದೆ, ಆದರೆ ಇವರಿಗೆಲ್ಲಾ ಈಗಲಾದರೂ ಗ್ರಾಮಸಭೆಗೆ ಹೋಗಿ ಜನರ ಕಷ್ಟಗಳನ್ನು ಕೆಳಬೇಕು ಎಂದು ಅನ್ನಿಸಿರುವುದು ಸಂತೋಷವೇ ಆದರೆ ನಿಮಗೆ ನಾನು ಮಾಡಿದ ಕೆಲಸವನ್ನೇ ಕಾಪಿ  ಮಾಡಲು ನಾಚಿಕೆಯಾಗುವುದಿಲ್ಲವೇ' ಎಂದು ಪ್ರಶ್ನಿಸಿದ್ದಾರೆ. 
ಕಳೆದ ವರ್ಷ ಫೆಬ್ರವರಿ 17ರಂದು ಕೆ. ಪಳನಿಸ್ವಾಮಿ ಅವರು  ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕ ಸ್ಟಾಲಿನ್ ಅವರು ವಿಧಾನಸಭೆಗೆ ಹರಿದ ಅಂಗಿಯನ್ನು ತೊಟ್ಟುಕೊಂಡು ಬಂದಿದ್ದರು. ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಸ್ಟಾಲಿನ್ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಮತ್ತು ತನ್ನ ಪಕ್ಷ ಸ್ಪರ್ಧಿಸುವುದು ಖಚಿತ ಎಂದು ನಟ ಮತ್ತು ‘ಮಕ್ಕಳ್ ನೀದಿ ಮೈಯಂ’ ಪಕ್ಷದ ಸ್ಥಾಪಕ ಕಮಲ್ ಹಾಸನ ಹೇಳಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಅವರು ತಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಯ ಬೆನ್ನಲ್ಲೇ ಕಮಲ್ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ. 
ರಾಜಕೀಯಕ್ಕೆ ಬರುವ ನಿರೀಕ್ಷೆ ಹುಟ್ಟುಹಾಕಿ, ಜನರೊಂದಿಗೆ ಸಕ್ರಿಯವಾಗಿ ಬೆರೆತು ಅವರಲ್ಲಿ ಭರವಸೆ – ನಿರೀಕ್ಷೆಗಳನ್ನು ಹುಟ್ಟುಹಾಕಿ ಕೊನೇ ಕ್ಷಣದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಯಾರಾದರೂ ಹೇಳಿದರೆ ಆಗ ನೀವು  ಖಂಡಿತವಾಗಿ ನಗೆಪಾಟಲಿಗೀಡಾಗುತ್ತೀರೆ ಎಂದು ಕಮಲ್ ಹಾಸನ್ ಅವರು ಪರೋಕ್ಷವಾಗಿ ರಜನಿಕಾಂತ್ ಅವರಿಗೆ ಟಾಂಗ್ ನೀಡಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ