ಬಾಬಾ ರಾಮ್ ದೇವ್ 
ದೇಶ

ಯೋಗ ಮಾಡಿದ್ದಕ್ಕೆ ನೆಹರೂ, ಮೋದಿ ಪ್ರಧಾನಿಯಾದರು: ಬಾಬಾ ರಾಮ್ ದೇವ್

ಜವಾಹರಲಾಲ್ ನೆಹರೂ ಹಾಗೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಯೋಗ ಒಂದು ಸಾಧನವಾಗಿತ್ತು ಎಂದು ಯೋಗ ಗುರು ಬಾಬಾ....

ರಾಯಪುರ್: ಜವಾಹರಲಾಲ್ ನೆಹರೂ ಹಾಗೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಯೋಗ ಒಂದು ಸಾಧನವಾಗಿತ್ತು ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಮಂಗಳವಾರ ಹೇಳಿದ್ದಾರೆ.
ನೆಹರೂ ಮತ್ತು ಮೋದಿ ಪ್ರಧಾನಿಯಾಗಲು ಯೋಗ ಪ್ರಮುಖ ಕಾರಣ ಎಂದಿರುವ ಯೋಗ ಗುರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಯೋಗ ಮಾಡುವುದರಲ್ಲಿ ಉತ್ಸುಕರಾಗಿದ್ದಾರೆ ಎಂದಿದ್ದಾರೆ.
ರಾಜಕಾರಣಿಗಳು ಒತ್ತಡ ಮುಕ್ತರಾಗಲು ಪ್ರಾಚೀನ ಕಾಲದ ವ್ಯಾಯಾಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಯೋಗ ಗುರು ಹಾಗೂ ಉದ್ಯಮಿ ಬಾಬಾ ರಾಮ್ ದೇವ್ ಅವರು ಸಲಹೆ ನೀಡಿದ್ದಾರೆ.
ಯೋಗ ಮಾಡುವವರಿಗೆ ಮಾತ್ರ ರಾಜ ಯೋಗ ದೊರೆಯುತ್ತದೆ ಎಂದು ರಾಮ್ ದೇವ್ ವರದಿಗಾರರಿಗೆ ತಿಳಿಸಿದ್ದಾರೆ.
ಜವಾಹರಲಾಲ್ ನೆಹರೂ ಅವರು ಯೋಗ ಮಾಡಲು ಆರಂಭಿಸಿದ ನಂತರವೇ ಅವರಿಗೆ ರಾಜ ಯೋಗ ಬಂದಿದ್ದು ಮತ್ತು ನಂತರ ಪ್ರಧಾನಿಯಾಗಿದ್ದರು. ಇಂದಿರಾ ಗಾಂಧಿ ಸಹ ಯೋಗ ಮಾಡುತ್ತಿದ್ದರು. ಹೀಗಾಗಿ ಅವರಿಗೂ ರಾಜ ಯೋಗ ಸಿಕ್ಕಿತ್ತು ಎಂದು ಯೋಗ ಗುರು ಹೇಳಿದ್ದಾರೆ.
ಪ್ರಧಾನಿ ಮೋದಿ ಸಹ ಯೋಗ ಮಾಡಿದ್ದರಿಂದಲೇ ಒಬ್ಬ ಚಾಹ ಮಾರುವವನ ಮಗ ಪ್ರಧಾನಿಯಾಗುವ ಯೋಗ ಬಂದಿದ್ದು ಎಂದು ರಾಮ್ ದೇವ್ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT