ಡೆಹರಾಡೂನ್: ನನ್ನನ್ನು ಹೆಚ್ಚು ಪ್ರೀತಿಸ್ತೀನಿ ಅಂತ ಸುಳ್ಳು ಹೇಳಿದ್ದೀರೀ. ನಿಮಗೆ ನನಗಿಂತ ಭಾರತಾಂಬೆ ಹೆಚ್ಚು. ಹೂವಿಂದ ಶೃಂಗರಿಸಿದ್ದ ಪೆಟ್ಟಿಗೆಯಲ್ಲಿ ಮಲಗಿದ್ದ ಹುತಾತ್ಮ ಪತಿಯನ್ನು ಕಂಡ ಪತ್ನಿಯ ನೊಂದ ಮಾತುಗಳು ಎಂತವರ ಕರಳನ್ನು ಹಿಂಡುವಂತ್ತಿತ್ತು.
ಶವಪೆಟ್ಟಿಗೆಯ ಮುಂದೆ ನಿಂತು ಪತಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಭಾರತಾಂಬೆಗಾಗಿ ಪ್ರಾಣ ತ್ಯಾಗ ಮಾಡಿ ಇನ್ನು ಬಾರದ ಲೋಕಕ್ಕೆ ಪ್ರಯಾಣಿಸಿದ್ದೀರಾ. ನಾನು ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತಿರುತ್ತೇನೆ. ಮೌನವಾಗಿ ನಿಂತ ಪತ್ನಿ ಒಬ್ಬ ವೀರನಿಗೆ ಹೇಗೆ ಅಂತಿಮ ವಿದಾಯ ಹೇಳಬೇಕೋ ಹಾಗೇ ಹೇಳಿ ಕಳುಹಿಸಿದಳು. ಆಕೆಯ ರೋಧನ ಅಲ್ಲಿ ನೆರೆದಿದ್ದವರು ಬಿಕ್ಕುವಂತೆ ಮಾಡಿತ್ತು.
ಕಳೆದ ವರ್ಷವಷ್ಟೇ ಅವರ ಮದುವೆಯಾಗಿತ್ತು. ಪ್ರೀತಿಸಿ ಮದುವೆಯಾಗಿದ್ದರು. ಅವರಿಬ್ಬರ ಪ್ರೀತಿಯ ಫಲವಾಗಿ ಹೊಟ್ಟೆಯಲ್ಲಿ ಚಿಗುರುತ್ತಿದ್ದ ಕೂಸು ಭೂಮಿಗೆ ಕಾಲಿಡುವ ಮೊದಲೇ ತಂದೆಯನ್ನು ಕಳೆದುಕೊಂಡಿತ್ತು.
ಮೇಜರ್ ವಿಭೂತಿ ಶಂಕರ್ ಅವರು ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಜೈಷ್ ಎ ಮೊಹಮ್ಮದ್ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ಮೂವರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದರು. ಇದೇ ಎನ್ ಕೌಂಟರ್ ಮೇಜರ್ ವಿಭೂತಿ ಶಂಕರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದರು.