ಜಲಪಾಯ್ ಗುರಿ: ಆನೆಯೊಂದು ಸ್ಕೂಟರ್ ನಿಂದ ಬಿದ್ದ ನಾಲ್ಕು ವರ್ಷದ ಬಾಲಕಿಯನ್ನು ಆನೆಗಳ ಹಿಂಡಿನಿಂದ ರಕ್ಷಣೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಜಲಪಾಯ್ ಗುರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಜಲಪಾಯ್ ಗುರಿಯ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಗೊರುಮಾರಾ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಉದ್ಯಮಿ ನಿತು ಘೋಷ್ ಕುಟುಂಬ ಇಲ್ಲಿನ ಅರಣ್ಯ ಪ್ರದೇಶದಲ್ಲಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಿ ಸ್ಕೂಟರ್ ಮೇಲೆ ವಾಪಸ್ಬರುತ್ತಿದ್ದರು.
ಈ ವೇಳೆ ಆನೆ ಹಿಂಡು ನೋಡಿ ಸ್ಕೂಟರ್ ಬ್ರೇಕ್ ಹಾಕಿದ್ದಾರೆ, ಇದರಿಂದ ಸ್ಕೂಟರ್ ನಲ್ಲಿದ್ದ ಮೂವರು ನೆಲಕ್ಕುರುಳಿದ್ದಾರೆ. ಈ ವೇಳೆ ಅದೇ ಗುಂಪಿನಲ್ಲಿದ್ದ ಆನೆಯೊಂದು ಕೆಳಗೆ ಬಿದ್ದ ಮಗುವಿನ ರಕ್ಷಣೆಗಾಗಿ ಒಂದು ಕಾಲು ಮುಂದೆ ಹಾಗೂ ಮತ್ತೊಂದು ಕಾಲು ಹಿಂದೆ ಇಟ್ಟುಕೊಂಡು ನಿಂತಿದೆ. ಆನೆಗಳ ಹಿಂಡು ಅಲ್ಲಿಂದ ಓದ ಬಳಿಕ ಮಗುವನ್ನು ಪೋಷಕರು ಎತ್ತಿಕೊಂಡಿದ್ದಾರೆ.
ಇದೇ ಜಾಗದಲ್ಲಿ ಕಳೆದ ಐದು ತಿಂಗಳಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಪುಟ್ಟ ಬಾಲಕಿ ಮಾತ್ರ ಪವಾಡ ಸದೃಶ ರೀತಿಯಲ್ಲಿ ಎಸ್ಕೇಪ್ ಆಗಿರುವುದು ನಿಜಕ್ಕೂ ಆಶ್ಚರ್ಯ ಎಂದು ಹೇಳಲಾಗುತ್ತಿದೆ.