ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡು: ಟಿಕ್ ಟಾಕ್ ವಿಡಿಯೋ ವಿಚಾರವಾಗಿ ಸ್ನೇಹಿತನಿಂದಲೇ ಹತ್ಯೆಯಾದ ಯುವಕ!

ಟಿಕ್ ಟಾಕ್ ವಿಡಿಯೋ ಅಪ್ ಲೋಡ್ ಮಾಡಿದ್ದ ಯುವಕನೊರ್ವನನ್ನು ಆತನ ಸ್ನೇಹಿತನೇ ಹತ್ಯೆ ಮಾಡಿರುವ ಘಟನೆ ತಿರುತಾಣಿ ಬಳಿಯ ತಲ್ಲಂಬೇಡು ಗ್ರಾಮದಲ್ಲಿ ನಡೆದಿದೆ.ವಿಜಯ್ ಮೃತಪಟ್ಟ ಯುವಕನಾಗಿದ್ದಾನೆ.

ಚೆನ್ನೈ: ಟಿಕ್ ಟಾಕ್ ವಿಡಿಯೋ ಅಪ್ ಲೋಡ್  ಮಾಡಿದ್ದ ಯುವಕನೊರ್ವನನ್ನು ಆತನ ಸ್ನೇಹಿತನೇ  ಹತ್ಯೆ ಮಾಡಿರುವ ಘಟನೆ ತಿರುತಾಣಿ ಬಳಿಯ ತಲ್ಲಂಬೇಡು ಗ್ರಾಮದಲ್ಲಿ   ನಡೆದಿದೆ.ವಿಜಯ್ ಮೃತಪಟ್ಟ ಯುವಕನಾಗಿದ್ದಾನೆ.

ಆರೋಪಿ ವೆಂಕಟರಾಮನ್  ಒಂದು ನಿರ್ದಿಷ್ಟ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋವನ್ನು  ವಿಜಯ್ ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಮಾಡಿದ್ದ. ಇದು ವೈರಲ್ ಆಗಿ, ಈ ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

 ಗ್ರಾಮಸ್ಥರ ಪ್ರತಿಭಟನೆ ತಿಳಿದು ಈ ಇಬ್ಬರೂ ಯುವಕರು ಬಚ್ಚಿಟ್ಟುಕೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದೆಂದು ಕಾಯ್ದಿದಿದ್ದಾರೆ.  ನಂತರ  ಹುಡುಕಾಟ ನಡೆಸಿದ ಪೊಲೀಸರು , ವಿಚಾರಣೆಗಾಗಿ ವೆಂಕಟರಾಮನ್ ತಂದೆಯನ್ನು ಬಂಧಿಸಿದ್ದಾರೆ.

ವಿಡಿಯೋ ಅಪ್ ಲೋಡ್ ಮಾಡಿದ ವಿಜಯ್ ಇದಕ್ಕೆಲ್ಲಾ ಕಾರಣ ಎಂದು ಕ್ರೋದಗೊಂಡ ವೆಂಕಟರಾಮನ್ , ಮಾರಕಾಸ್ತ್ರಗಳಿಂದ ವಿಜಯ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ . ನಂತರ ತಿರುತಾಣಿ ಠಾಣೆಗೆ ತೆರಳಿ ಶರಣಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!