ದೇಶ

ನನ್ನ ಹೃದಯಲ್ಲಿ ಮೋದಿ ಬಗ್ಗೆ ಯಾವುದೇ ದ್ವೇಷವಿಲ್ಲ, ಪ್ರೀತಿಯಿದೆ, ಹಾಗಾಗಿ ತಬ್ಬಿಕೊಂಡೆ: ರಾಹುಲ್ ಗಾಂಧಿ

Shilpa D
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ, ನನ್ನ ಹೃದಯದಲ್ಲಿ ಅವರ ಬಗ್ಗೆ ಪ್ರೀತಿಯಿದೆ, ಹೀಗಾಗಿ ಸಂಸತ್ತಿನಲ್ಲಿ ಅವರನ್ನು ತಬ್ಬಿಕೊಂಡೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡ ಸಂಬಂಧ ಹಲವು ಟೀಕೆಗಳು ವ್ಯಕ್ತ ಪಡಿಸಿದ್ದರು. ಕಳೆದ ವರ್ಷ ಬಾರೀ ಚರ್ಚೆಗೆ ಗ್ರಾಸವಾಗಿತ್ತು. 
ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ, ರಾಹುಲ್ ಗಾಂಧಿ, ನಿಮಗೆ (ಮೋದಿ) ನನ್ನ ಮೇಲೆ ದ್ವೇಷ ಹಾಗೂ ಕೋಪ ಇರಬಹುದು,  ನಿಜವಾಗಿ ಅವರ ಬಗ್ಗೆ ನನ್ನ ಹೃದಯದಲ್ಲಿ ಕೇವಲ ಪ್ರೀತಿಯಿದೆ ಎಂದು ಹೇಳಿದ್ದಾರೆ.
ಒಂದು ಅಪ್ಪುಗೆಯಿಂದ ಪ್ರೀತಿ ಸಾಧಿಸಬಹುದು, ನಿಮ್ಮ ಸಹಪಾಠಿಗಳಲ್ಲಿ ನಿಮ್ಮ ಬಗ್ಗೆ ಯಾರಿಗಾದರೂ ದ್ವೇಷ ಇದ್ದರೆ ಅವರನ್ನು ಒಮ್ಮೆ ತಬ್ಬಿಕೊಳ್ಳಿ, ಆಗ ಅವರ ಅವರ ಕೋಪ, ದ್ವೇಷ ಹೋಗುತ್ತದೆ, ಇದನ್ನೊಮ್ಮೆ ಪ್ರಯತ್ನಿಸಿ,  ಇದೊಂದು ಮ್ಯಾಜಿಕ್ ಎಂದು ಹೇಳಿದ್ದಾರೆ.
ಇಂದಿರಾಗಾಂಧಿ ಅವರ ಹತ್ಯೆಯಾದಾಗ  ಅಪ್ಪುಗೆಯ ಪವರ್ ತಿಳಿಯಿತು. ನನ್ನ ಅಜ್ಜಿ ನನಗೆ, ನನ್ನ ತಾಯಿಗಿಂತಲೂ ಹೆಚ್ಚು, ನನ್ನ ತಾಯಿ ಬಹಳ ಶಿಸ್ತು, ನಾನು ಹೆಚ್ಚು ನನ್ನ ಅಜ್ಜಿಯ ಹಿಂದೆ ಅಡಗಿಕೊಳ್ಳುತ್ತಿದ್ದೆ, ಅವರ ಹತ್ಯೆ ನಂತರ ನಾನು ತುಂಬಾ ಬೇಸರದಲ್ಲಿದ್ದೆ, ನನಗೆ ತುಂಬಾ ಕೋಪ ಬಂದಿತ್ತು,
ನನ್ನ ಅಜ್ಜಿ ಹತ್ಯೆಯಾದಾಗ ನನ್ನ ತಂದೆ ರಾಜೀವ್ ಗಾಂಧಿ ಪಶ್ಚಿಮ ಬಂಗಾಳದಲ್ಲಿದ್ದರು, ನನ್ನ ತಂದೆ ವಾಪಸ್ ಬಂದಾಗ ನನಗೆ ತುಂಬಾ ಕೋಪ ಬಂದಿತ್ತು, ನನ್ನ ತಂದೆ ವಾಪಸ್ ಬಂದು ನನ್ನನ್ನು ಅಪ್ಪಿಕೊಂಡರು, ನನ್ನ ಕೋಪವೆಲ್ಲಾ ಕರಗಿಹೋಯಿತು ಎಂದು ಹೇಳಿದ್ದಾರೆ.  
SCROLL FOR NEXT