ಶರದ್ ಪವಾರ್-ಸಚಿನ್ ತೆಂಡೂಲ್ಕರ್
ಮುಂಬೈ: ಮುಂದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಜೊತೆ ಭಾರತ ಪಂದ್ಯವನ್ನು ನಿಷೇಧಿಸಬಾರದು ಎಂದು ಹೇಳಿರುವ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಹೇಳಿಕೆಗೆ ವ್ಯಕ್ತವಾಗಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಎನ್ ಸಿಪಿ ನಾಯಕ ಶರದ್ ಪವಾರ್, ಸಚಿನ್ ಮಾತನ್ನು ಟೀಕಿಸುವವರು ಒಂದು ಅರ್ಥ ಮಾಡಿಕೊಳ್ಳಬೇಕು, ಅವರು ಪಾಕಿಸ್ತಾನವನ್ನು ಸೋಲಿಸುವ ಮೂಲಕವೇ ತಮ್ಮ ಕ್ರಿಕೆಟ್ ವೃತ್ತಿಯನ್ನು ಆರಂಭಿಸಿದ್ದು ಎಂದರು.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಂಡೂಲ್ಕರ್ ಭಾರತ ರತ್ನ, ಭಾರತದ ಕ್ರಿಕೆಟ್ ಲೋಕದ ಮತ್ತೊಬ್ಬ ಮಾಂತ್ರಿಕ ಸುನಿಲ್ ಗವಾಸ್ಕರ್ ದೇಶಕ್ಕೆ ಹೆಮ್ಮೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿರುವ ಶರದ್ ಪವಾರ್ ಹೇಳಿದ್ದಾರೆ.
ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸುತ್ತದೆ ಎಂದು ಗೊತ್ತಿದೆ. ಆದರೂ ಕೂಡ ತೆಂಡೂಲ್ಕರ್ ಅವರನ್ನು ಟೀಕಿಸಲಾಗುತ್ತಿದೆ, ಅವರು ಪಾಕಿಸ್ತಾನದ ಪರವಾಗಿದ್ದಾರೆ ಎಂದು ಎಲ್ಲರೂ ನಂಬಿಕೊಂಡಿದ್ದಾರೆ. ತಮ್ಮ ಅಮೋಘ ವೃತ್ತಿಯನ್ನು ಸಚಿನ್ ಅವರು 15 ವರ್ಷದವರಿದ್ದಾಗ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಆರಂಭಿಸಿದ್ದರು ಎಂದು ಪವಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics