ದೇಶ

ಎಮ್ ಜೆ ಅಕ್ಬರ್ ಮಾನನಷ್ಟ ಮೊಕದ್ದಮೆ: ಪತ್ರಕರ್ತೆ ಪ್ರಿಯಾ ರಮಣಿಗೆ ಜಾಮೀನು

Raghavendra Adiga
ನವದೆಹಲಿ: ಮಾಜಿ ಕೇಂದ್ರ ಸಚಿವ ಎಂ.ಜೆಕ್ ಅಕ್ಬರ್ ಸಲ್ಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಅವರಿಗೆ  ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಕೇಂದ್ರ ಸಚಿವರಾಗಿದ್ದ ಎಂ.ಜೆ. ಅಕ್ಬರ್ ತಾವು ಪತ್ರಿಕಾ ಸಂಪಾದಕರಾಗಿದ್ದ ವೇಳೆ ತನಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ರಮಣಿ ಆರೋಪಿಸಿದ್ದು ಇದಕ್ಕೆ ಪ್ರತಿಯಾಗಿ ಅಕ್ಬರ್ ರಮಣಿ ಅವರ ವಿರುಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮಾರ್ ವಿಶಾಲ್ ರೂ. 10,000 ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ
ಪ್ರಿಯಾ ರಮಣಿ ಅಕ್ಬರ್ ವಿರುದ್ಧ ಮಾಡಿದ ಎಲ್ಲಾ ಆರೊಪಗಳನ್ನು ನಿಜ ಎಂದು ಸಾಬೀತು ಮಾಡಲು ರಮಣಿಗೆ ನ್ಯಾಯಾಲಯ ಸೂಚಿಸಿತ್ತು. ಇದೇ ವೇಳೆ ಅಕ್ಬರ್ ತಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳೆಂದು ಹೇಳಿ ಸಾರಾಸಗಟು ನಿರಾಕರಿಸಿದ್ದರು.
ಜಾಮೀನು ಸಿಕ್ಕ ನಂತರ ಮೊದಲ ಬಾರಿಗೆ ಎಅಎನ್ ಐ ಜತೆ ಮಾತನಾಡಿದ ಪ್ರಿಯಾ ರಮಣಿ "ನ್ಯಾಯಲಯ ನನ್ನನ್ನು ಆರೋಪಿ ಎಂದಿದೆ. ಆದರೆ ನಾನು ಮುಂದಿನ ದಿನಗಳಲ್ಲಿ ಅವರ ವಾದಕ್ಕೆ ತಕ್ಕ ಸ್ಪಷ್ಟನೆ ನೀಡಲಿದ್ದೇನೆ. ಸತ್ಯ ನನ್ನ ಕಡೆಗಿದೆ" ಎಂದಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 8ಕ್ಕೆ ನಿಗದಿಯಾಗಿದೆ.
SCROLL FOR NEXT