ಮಾಯಾವತಿ, ಅಖಿಲೇಶ್ ಯಾದವ್ 
ದೇಶ

ಉತ್ತರ ಖಂಡ್, ಮಧ್ಯಪ್ರದೇಶದಲ್ಲೂ ಬಿಎಸ್ಪಿ- ಎಸ್ಪಿ ಮೈತ್ರಿ ವಿಸ್ತರಣೆ

ಮುಂಬರುವ ಲೋಕಸಭಾ ಚುನಾವಣೆಗಾಗಿ ಉತ್ತರ ಪ್ರದೇಶದಲ್ಲಿ ಮಹಾಘಟಬಂದನ್ ನಿಂದ ಹೊರಗುಳಿದು ಮೈತ್ರಿ ಮಾಡಿಕೊಂಡಿರುವ ಬಿಎಸ್ಪಿ ಹಾಗೂ ಎಸ್ಪಿ ಪಕ್ಷಗಳು, ಉತ್ತರ ಖಂಡ್ ಹಾಗೂ ಮಧ್ಯಪ್ರದೇಶದಲ್ಲೂ ಮೈತ್ರಿ ವಿಸ್ತರಿಸಿಕೊಂಡಿವೆ.

ಲಖನೌ:  ಮುಂಬರುವ ಲೋಕಸಭಾ ಚುನಾವಣೆಗಾಗಿ ಉತ್ತರ ಪ್ರದೇಶದಲ್ಲಿ  ಮಹಾಘಟಬಂದನ್ ನಿಂದ  ಹೊರಗುಳಿದು ಮೈತ್ರಿ ಮಾಡಿಕೊಂಡಿರುವ ಬಿಎಸ್ಪಿ ಹಾಗೂ ಎಸ್ಪಿ ಪಕ್ಷಗಳು, ಉತ್ತರ ಖಂಡ್ ಹಾಗೂ ಮಧ್ಯಪ್ರದೇಶದಲ್ಲೂ ಮೈತ್ರಿ ವಿಸ್ತರಿಸಿಕೊಂಡಿವೆ.

ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ ಬಾಲ್ಗಟ್, ಟಿಕಮ್ ಘಡ, ಖಜುರಾಹೋದಲ್ಲಿನ ಮೂರು ಕ್ಷೇತ್ರಗಳಲ್ಲಿ ಮಾತ್ರ ಎಸ್ಪಿ ಸ್ಪರ್ಧಿಸಲಿದ್ದು, ಉಳಿದ 26 ಸ್ಥಾನಗಳಲ್ಲಿ ಬಿಎಸ್ಪಿ ಪಕ್ಷ ಸ್ಪರ್ಧಿಸಲಿದೆ.

ಉತ್ತರ ಖಂಡ್ ನಲ್ಲೂ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಎಸ್ಪಿಯ ಮುಖ್ಯಸ್ಥ ಅಖಿಲೇಶ್  ಯಾದವ್ ಮೈತ್ರಿ ಮಾಡಿಕೊಂಡಿದ್ದಾರೆ. ಉತ್ತರ್ ಖಂಡ್ ನ ಗರ್ವಾಲಾ ಕ್ಷೇತ್ರದಲ್ಲಿ ಮಾತ್ರ ಎಸ್ಪಿ ಸ್ಪರ್ಧಿಸಲಿದ್ದು, ಉಳಿದ ನಾಲ್ಕು  ಕ್ಷೇತ್ರಗಳಲ್ಲಿ ಬಿಎಸ್ಪಿ ಸ್ಪರ್ಧಿಸಲಿದೆ

ಉತ್ತರ ಪ್ರದೇಶದಲ್ಲಿ ಬಿಎಸ್ಪಿ 38, ಎಸ್ಪಿ 37, 2 ಕಾಂಗ್ರೆಸ್  ಸೇರಿದಂತೆ ಇತರ ಪಕ್ಷಗಳು 5 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಮೈತ್ರಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; 'ಅನಿವಾರ್ಯ ಕಾರಣ' ಎಂದ ವಿವಿ