ದೇಶ

ಅಯೋಧ್ಯೆಯಲ್ಲಿ ಪ್ರಾರ್ಥನೆ ಮೂಲಭೂತ ಹಕ್ಕು: ತ್ವರಿತ ವಿಚಾರಣೆಗೆ ಸುಬ್ರಹ್ಮಣ್ಯ ಸ್ವಾಮಿ 'ಸುಪ್ರೀಂ' ಮೊರೆ

Sumana Upadhyaya
ನವದೆಹಲಿ: ಅಯೋಧ್ಯೆಯ ವಿವಾದಿತ ರಾಮ ಮಂದಿರ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಭೂತ ಹಕ್ಕನ್ನು ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ತುರ್ತು ವಿಚಾರಣೆ ನಡೆಸಬೇಕೆಂದು ಕೋರಿ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನ ಅವರಿದ್ದ ನ್ಯಾಯಪೀಠ ಸ್ವಾಮಿಯವರಿಗೆ ನಾಳೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಉಪಸ್ಥಿತರಿರುವಂತೆ ಸೂಚಿಸಿದೆ. ನಾಳೆ ಅಯೋಧ್ಯೆ ವಿವಾದದ ಮುಖ್ಯ ವಿಚಾರ ವಿಚಾರಣೆಗೆ ಬರಲಿದೆ.
ತುರ್ತು ವಿಚಾರಣೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ ಸ್ವಾಮಿಯವರು ಇದನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕೆಂದು ಸಹ ಕೋರಿದ್ದಾರೆ.
SCROLL FOR NEXT