ಬಾಲಾಕೋಟ್ ಉಗ್ರರ ಕ್ಯಾಂಪ್ 
ದೇಶ

ದಶಕಗಳಿಂದ ಅಮೆರಿಕಕ್ಕೂ ದುಃಸ್ವಪ್ನವಾಗಿದ್ದ ಬಾಲಾಕೋಟ್ ಉಗ್ರ ಕ್ಯಾಂಪ್ ಭಾರತದಿಂದ 21 ನಿಮಿಷದಲ್ಲೇ ಧ್ವಂಸ!

ಪಾಕಿಸ್ತಾನದ ಉಗ್ರರ ಸ್ವರ್ಗವೆಂದೇ ಕುಖ್ಯಾತಿಗಳಿಸಿದ್ದ ಬಾಲಾಕೋಟ್ ಉಗ್ರ ಕ್ಯಾಂಪ್ ಭಾರತೀಯ ವಾಯುಸೇನೆಯ ಸಾಹಸದಿಂದಾಗಿ ಧ್ವಂಸವಾಗಿದೆ. ಆದರೆ ಈ ಉಗ್ರ ಕ್ಯಾಂಪ್ ಮೇಲೆ ಕಳೆದ 15 ವರ್ಷಗಳಿಂದಲೂ ಅಮೆರಿಕ ಕಣ್ಣಿಟ್ಟು ಧ್ವಂಸ ಮಾಡಲು ಕಾಯುತ್ತಿತ್ತು ಎಂಬುದು ನಿಮಗೆ ಗೊತ್ತೇ...?

ನವದೆಹಲಿ: ಪಾಕಿಸ್ತಾನದ ಉಗ್ರರ ಸ್ವರ್ಗವೆಂದೇ ಕುಖ್ಯಾತಿಗಳಿಸಿದ್ದ ಬಾಲಾಕೋಟ್ ಉಗ್ರ ಕ್ಯಾಂಪ್ ಭಾರತೀಯ ವಾಯುಸೇನೆಯ ಸಾಹಸದಿಂದಾಗಿ ಧ್ವಂಸವಾಗಿದೆ. ಆದರೆ ಈ ಉಗ್ರ ಕ್ಯಾಂಪ್ ಮೇಲೆ ಕಳೆದ 15 ವರ್ಷಗಳಿಂದಲೂ ಅಮೆರಿಕ ಕಣ್ಣಿಟ್ಟು ಧ್ವಂಸ ಮಾಡಲು ಕಾಯುತ್ತಿತ್ತು ಎಂಬುದು ನಿಮಗೆ ಗೊತ್ತೇ...?
ಹೌದು ಕಳೆದ 15 ವರ್ಷಗಳಿಂದಲೂ ಅಮೆರಿಕದ ಗುಪ್ತಚರ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಾಕೋಟ್ ಉಗ್ರ ಕಾಂಪ್ ಮೇಲೆ ನಿರಂತರ ಕಣ್ಣಿಟ್ಟಿತ್ತು, ಉಗ್ರಗಾಮಿಗಳ ಸ್ವರ್ಗವಾಗಿದ್ದ ಇಲ್ಲಿ ಬೃಹತ್ ಪ್ರಮಾಣದ ಉಗ್ರರರನ್ನು ತಯಾರು ಮಾಡಲಾಗುತ್ತಿತ್ತು. ಯುವಕರಿಗೆ ಇಸ್ಲಾಂ ಶಿಕ್ಷಣ ತರಬೇತಿಯಿಂದ ಹಿಡಿದು ಉಗ್ರ ತರಬೇತಿ ವರೆಗೂ ಎಲ್ಲ ಬಗೆಯ ತರಬೇತಿಯನ್ನು ಇಲ್ಲಿಯೇ ನೀಡಲಾಗುತ್ತಿತ್ತು. ಅಲ್ಲದೆ ಈ ಬಾಲಾಕೋಟ್ ಉಗ್ರ ಕ್ಯಾಂಪ್ ಗೆ ಪಾಕಿಸ್ತಾನದ ಸೇನೆ ಮತ್ತು ಐಎಸ್ ಐ ನಿರಂತರ ರಕ್ಷಣೆ ನೀಡುತ್ತಿತ್ತು. ಇದೇ ಕಾರಣಕ್ಕೆ ಅಮೆರಿಕ ಕಳೆದ 15 ವರ್ಷಗಳಿಂದ ಈ ಉಗ್ರ ಕ್ಯಾಂಪ್ ನಲ್ಲಿನ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು.
15 ವರ್ಷಗಳ ಹಿಂದೆ ಅಂದರೆ 2004 ಜನವರಿ 31ರಂದು ಅಮೆರಿಕದ ಗುಪ್ತಚರ ಸಂಸ್ಛೆ ಎಫ್ ಬಿಐ ಹಫೀಜ್ ಕೆ ರೆಹಮಾನ್ ಎಂಬ ಉಗ್ರನ ಕುರಿತು ಮಾಹಿತಿ ಕಲೆಹಾಕಿತ್ತು. ಈತನ ಮೂಲ ಕೆದಕಿದ್ದ ವೇಳೆ ಈತ ಬಾಲಾಕೋಟ್ ಉಗ್ರ ಕ್ಯಾಂಪ್ ನಲ್ಲಿ ತರಬೇತಿ ಪಡೆದ ಉಗ್ರನೆಂಬ ಮಾಹಿತಿಯನ್ನು ಎಫ್ ಬಿಐ ಕಲೆ ಹಾಕಿತ್ತು. ಅಲ್ಲದೆ ಬಾಲಾಕೋಟ್ ಕ್ಯಾಂಪ್ ನಲ್ಲಿ ಉಗ್ರರಿಗೆ ಕೇವಲ ಶಸ್ತ್ರಾಸ್ತ್ರ ತರಬೇತಿ ಮಾತ್ರವಲ್ಲದೇ ಅತ್ಯಾಧುನಿಕ ಬಾಂಬ್ ಗಳ ತಯಾರಿ ಅವುಗಳ ನಿರ್ವಹಣೆ, ಹಾಗೂ ಅತ್ಯಾಧುನಿಕ ಯುದ್ಧ ತರಬೇತಿ ಸೇರಿದಂತೆ ಹಲವು ವಿಚಾರಗಳ ಕುರಿತು ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು. ಅಂದಿನಿಂದಲೇ ಅಮೆರಿಕ ಸರ್ಕಾರ ಬಾಲಾಕೋಟ್ ಉಗ್ರ ಕ್ಯಾಂಪ್ ಮೇಲೆ ನಿರಂತರ ಕಣ್ಣಿಟ್ಟಿತ್ತು. ಅಲ್ಲದೆ ಕ್ಯಾಂಪ್ ಧ್ವಂಸಕ್ಕೆ ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿತ್ತು.
ಆದರೆ ಈಗ ಇದೇ ಬಾಲಾಕೋಟ್ ಕ್ಯಾಂಪ್ ಅನ್ನು ಭಾರತೀಯ ವಾಯು ಸೇನೆ ಕೇವಲ 21 ನಿಮಿಷಗಳ ಕಾರ್ಯಾಚರಣೆಯಲ್ಲಿ ಉಡಾಯಿಸಿದೆ. ಅಲ್ಲದೆ ಇಲ್ಲಿದ್ದ ಉಗ್ರರು, ಉಗ್ರರ ತರಬೇತಿದಾರರು, ಯುವಕರ ತಲೆಗೆ ಮತಾಂಧತೆ ತುಂಬುತ್ತಿದ್ದ ಮೂಲಭೂತವಾದಿ ಮುಲ್ಲಾಗಳು ಸೇರಿದಂತೆ ಎಲ್ಲರೂ ಸಾವಿಗೀಡಾಗಿದ್ದಾರೆ. ಆ ಮೂಲಕ ಕಳೆದ 15 ವರ್ಷಗಳಲ್ಲಿ ಅಮೆರಿಕ ಸಾಧಿಸಲಾಗದ್ದನ್ನು ಭಾರತೀಯ ವಾಯುಸೇನೆ ಕೇವಲ 21 ನಿಮಿಷದಲ್ಲಿ ಸಾಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ