ನವದೆಹಲಿ: ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಸರಿ ಸುಮಾರು 200 ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗಿದೆ.
ಗಡಿ ನಿಯಂತ್ರಣ ರೇಖೆಯಾಚೆ ಇರುವ ಬಲಾಕೋಟ್, ಚಕೋತಿ ಮತ್ತು ಮುಜಾಫರ್ಬಾದ್ ನಲ್ಲಿದ್ದ ಉಗ್ರರ ನೆಲೆಗಳು ವೈಮಾನಿಕ ದಾಳಿಯಲ್ಲಿ ಸಂಪೂರ್ಣ ನಾಶವಾಗಿವೆ, ಜೈಷೆ ಸಂಘಟನೆಯ ನಿಯಂತ್ರಣ ಕೊಠಡಿ ಕೂಡಾ ಧ್ವಂಸ ವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.