ಸಂಗ್ರಹ ಚಿತ್ರ 
ದೇಶ

ಪ್ರತೀಕಾರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದಿಂದ ಏರ್ ಸ್ಟ್ರೈಕ್; ಜೈಷ್ ಅಡಗುದಾಣಗಳು ಧ್ವಂಸ; ವರದಿ

ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಕಳೆದ ರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದೆ.

ಇಸ್ಲಾಮಾಬಾದ್: ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಕಳೆದ ರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆಯ ಅಡಗು ದಾಣಗಳ ಮೇಲೆ ಕಳೆದ ರಾತ್ರಿ 3.30ರ ಸುಮಾರಿಗೆ 12 ಮಿರಾಜ್-2000 ಯುದ್ಧ ವಿಮಾನಗಳು 1000 ಕೆಜಿ ಬಾಂಬ್ ದಾಳಿ ಮಾಡಿದ್ದು ಪರಿಣಾಮ 500 ಮೀಟರ್ ಪ್ರದೇಶ ಸಂಪೂರ್ಣ ಸರ್ವನಾಶವಾಗಿದೆ ಎಂದು ತಿಳಿದುಬಂದಿದೆ.
ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮೂರು ಕಂಟ್ರೋಲ್ ರೂಂಗಳು ಧ್ವಂಸ ಮಾಡಿದೆ. ಒಟ್ಟು 1000 ಕೆಜಿಯ 10 ಬಾಂಬ್ ಗಳನ್ನು ಬಾಲಾಕೋಟ್, ಮುಜಾಫ್ಪರಾಬಾದ್ ಚಾಕೋಟಿಯಲ್ಲಿ ಏರ್ ಸ್ಟ್ರೈಕ್ ಮಾಡಲಾಗಿದೆ.
ಇದಕ್ಕೆ ಪೂರಕವೆಂಬಂತೆ ಪಾಕ್ ನೆಲದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಬಹುದೆಂದು ಹೆದರಿ ಕುಳಿತಿರುವ ಪಾಕಿಸ್ತಾನ ಇದೀಗ ಭಾರತೀಯ ಸೇನೆಯ ಯುದ್ಧ ವಿಮಾನ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಒಳ ಬಂದಿದೆ ಎಂದು ಗಂಭೀರ ಆರೋಪ ಮಾಡಿರುವುದು ಇದಕ್ಕೆ ಪುಷ್ಠಿ ತಂದಿದೆ.
ಭಾರತೀಯ ಸೇನೆಯ ಯುದ್ಧ ವಿಮಾನ ಮುಜಾಫ್ಫರಾಬಾದ್ ಗೆ ಬಂದಿತ್ತು. ಈ ವೇಳೆ ಪಾಕಿಸ್ತಾನ ಸೇನೆ ತಕ್ಷಣವೇ ಕಾರ್ಯಾಚರಣೆ ಮಾಡಿತ್ತು. ಇದರಿಂದ ಭಾರತದ ಯುದ್ಧ ವಿಮಾನ ವಾಪಸಾಗಿದೆ ಎಂದು ಮೇಜರ್ ಜನರಲ್ ಅಸೀಫ್ ಗಫರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

Cricket Wedding: ಬಾಲ್ಯದ ಗೆಳತಿ ವಂಶಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ Kuldeep Yadav!

IPL ಫ್ರಾಂಚೈಸಿ ಕಾವ್ಯಾ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ Pak ಬೌಲರ್ ಅಬ್ರಾರ್‌ಗೆ ಸಂಕಷ್ಟ, ಹಣನಾ-ರಾಷ್ಟ್ರನಾ; ಅತಂತ್ರ ಸ್ಥಿತಿಯಲ್ಲಿ PCB!

ಒಂದು ರೂಪಾಯಿಗೆ ಒಂದು ಲೀಟರ್ ಹಾಲು!: ಬಮುಲ್ ಅಧ್ಯಕ್ಷ DK Suresh ಹೇಳಿದ್ದೇನು?

Cricket: ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ, ICC ಕ್ರಮ .. ಡಿಮೆರಿಟ್ ಪಾಯಿಂಟ್!

SCROLL FOR NEXT