ಸಂಗ್ರಹ ಚಿತ್ರ 
ದೇಶ

'ಆ 21 ನಿಮಿಷ' ಭಾರತದ 3ನೇ ಬಲಿಷ್ಠ ಯುದ್ಧ ವಿಮಾನ 'ಮಿರಾಜ್-2000' ಕಾರ್ಯಾಚರಣೆ ಹೇಗಿತ್ತು?

ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ದಾಳಿ ನಡೆಸುತ್ತದೆ ಎಂಬ ಹೆದರಿಕೆಯಲ್ಲಿದ್ದ ಪಾಕಿಸ್ತಾನ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದರು ಅಂತಾರಾಷ್ಟ್ರೀಯ ಗಡಿಯನ್ನೇ...

ನವದೆಹಲಿ: ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ದಾಳಿ ನಡೆಸುತ್ತದೆ ಎಂಬ ಹೆದರಿಕೆಯಲ್ಲಿದ್ದ ಪಾಕಿಸ್ತಾನ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದರು ಅಂತಾರಾಷ್ಟ್ರೀಯ ಗಡಿಯನ್ನೇ ದಾಟಿದ ಭಾರತದ ಬಲಿಷ್ಠ ಯುದ್ಧ ವಿಮಾನ ಮಿರಾಜ್-2000 ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕವನ್ನೇ ಸೃಷ್ಠಿಸಿ ಯಶಸ್ವಿಯಾಗಿ ಸ್ವದೇಶಕ್ಕೆ ಮರಳಿದೆ.
ಹೌದು. ಮಿರಾಜ್ 2000 ಯುದ್ಧ ವಿಮಾನ ಲೇಸರ್ ನಿಯಂತ್ರಿತ ಬಾಂಬ್ ಬಳಸಿ ದಾಳಿ ನಡೆಸಿದೆ. ಪಾಕಿಸ್ತಾನದ ರೇಡಾರ್ ಅನ್ನೇ ಕಣ್ತಪ್ಪಿಸಿ ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಿದೆ. ಪಂಜಾಬ್ ನ ಆದಂಪುರ್ ವಾಯುನೆಲೆಯಿಂದ ರ್ಯಾಪಿಡ್ ಸೀಕ್ ಮತ್ತು ಡೆಸ್ಟ್ರಾಯ್ ಮಿಷನ್ ಶುರು ಮಾಡಲಾಗಿತ್ತು. ಈ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದೆ. 
ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿದ 21 ನಿಮಿಷಗಳಲ್ಲಿ ಮಿರಾಜ್-2000 ಮಿಂಚಿನ ವೇಗದಲ್ಲಿ ದಾಳಿಯನ್ನು ನಡೆಸಲಾಗಿದೆ. ಬಾಲಾಕೋಟ್ ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಮುಂಜಾನೆ 3.45ಕ್ಕೆ ಮುಜಫ್ಫರಾಬಾದ್ ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಮುಂಜಾನೆ 3.48ಕ್ಕೆ ಚಾಕೋಟಿ ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಮುಂಜಾನೆ 3.58ಕ್ಕೆ ದಾಳಿ ನಡೆಸಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಭಾರತೀಯ ವಾಯುಪಡೆಯ ಯುದ್ಧ ವಿಮಾನ ಮಿರಾಜ್ ಬಾಂಬ್ ದಾಳಿ ನಡೆಸಿದಾಗ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆ ತಾವು ಪ್ರತಿದಾಳಿ ನಡೆಸಿರುವುದಾಗಿ ಹೇಳಿದೆ. ಆದರೆ ಪಾಕ್ ಪ್ರತಿದಾಳಿಗೂ ಮುನ್ನ ಮಿರಾಜ್ ಸ್ವದೇಶಕ್ಕೆ ಮರಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video

Asian Games 2026: 'ನೀನ್ ಕ್ಯಾಚ್ ಬಿಡು, ನಾವ್ ನೀರು ಬಿಡ್ತೀವಿ': ಫೀಲ್ಡಿಂಗ್ ಮಾಡುತ್ತಿದ್ದ ಪಾಕ್ ಬೌಲರ್ ಗೆ ಅಭಿಮಾನಿಗಳ ಕಾಟ! Video

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!

'ಅಸಹ್ಯ, ವಿಕೃತ, ನಾಚಿಕೆಗೇಡು.. ಕ್ಷಮಿಸೋ ಮಾತೇ ಇಲ್ಲ.. ಕಾನೂನು ಕ್ರಮ ಖಂಡಿತ': ನಟ Jr NTR ಕೆಂಡಾಮಂಡಲ, ಆಗಿದ್ದೇನು?