ದೇಶ

ವಾಯುಪಡೆ ದಾಳಿ: ಪಂಜಾಬಿನ ಆರು ಗಡಿ ಜಿಲ್ಲೆಗಳಲ್ಲಿ ಹೈ ಆಲರ್ಟ್

Nagaraja AB

ಅಮೃತಸರ:ಪಾಕಿಸ್ತಾನದಲ್ಲಿನ ಜೈಷ್ -ಇ-ಮೊಹಮ್ಮದ್ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ ಉಡೀಸ್ ಮಾಡಿದ ಹಿನ್ನೆಲೆಯಲ್ಲಿ ಪಂಜಾಬಿನ ಗಡಿಯಲ್ಲಿನ ಆರು ಜಿಲ್ಲೆಗಳಲ್ಲಿ  ಹೈ ಆಲರ್ಟ್ ಘೋಷಿಸಲಾಗಿದೆ.

ವಾಯುಪಡೆಯ ದಾಳಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಮರಿಂದಲ್ ಸಿಂಗ್ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಕಾನೂನು ಮತ್ತು ಪರಾಮರ್ಶನಾ  ಸಭೆ ನಡೆಯಿತು. ಸೂಕ್ತ ಮುನ್ನಚ್ಚೆರಿಕಾ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಆದೇಶಿಸಿದ್ದರು.

ಯಾವುದೇ ಭಯಪಡಬೇಕಾದ ಅಗತ್ಯವಿಲ್ಲ. ಆದಾಗ್ಯೂ, ಪೇರೊಜ್ ಪುರ, ತರ್ನ್, ತರಾಣ್,  ಅಮೃತಸರ, ಗುರುದಾಸಪುರ, ಪಠಾಣ್ ಕೋಟ್,  ಪಜಿಕಾ ಗಡಿ ಪ್ರದೇಶದಲ್ಲಿ ಹೈ ಆಲರ್ಟ್  ಘೋಷಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಜನರಿಗೆ ಸುರಕ್ಷತೆ ಹಾಗೂ ಭದ್ರತೆ  ಒದಗಿಸುವ ನಿಟ್ಟಿನಲ್ಲಿ  ಎಲ್ಲೆಡೆ ಹದ್ದಿನ ಕಣ್ಣಿಡುವಂತೆ ಗಡಿ ಜಿಲ್ಲೆಗಳ ಪೊಲೀಸ್ ಮಹಾನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ   ಪಂಜಾಬ್ ಮುಖ್ಯಮಂತ್ರಿಗಳು ನಾಳೆ ಪಠಾಣ್ ಕೋಟ್ ನಿಂದ ಪೇರೊಜ್ ಪುರದವರೆಗೂ  ರಸ್ತೆ ಮೂಲಕ ಭೇಟಿ ನೀಡಲಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

SCROLL FOR NEXT