ಲಖನೌ: ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಸಲಿಂಗಿ ಮಹಿಳೆಯರು ತಮ್ಮ ಗಂಡಂದಿರಿಗೆ ವಿಚ್ಚೇದನ ನೀಡಿದ ಬಳಿಕ ಪರಸ್ಪರ ವಿವಾಹವಾಗಿರುವ ಪ್ರಕರಣ ಉತ್ತರ ಪ್ರದೇಶದ ಬುಂದೇಲ್ ಖಂಡ್ ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹಮೀರ್ ಪುರ್ ಮೂಲದ 24 ಹಾಗೂ 26 ವರ್ಷದ ಮಹಿಳೆಯರು ಶನಿವಾರ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಆದರೆ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ವಿವಾಹವಾಗಿರುವ ಈ ಮಹಿಳೆಯರ ವಿವಾಹಕ್ಕೆ ಸಮ್ಮತಿಸಲು ವಿವಾಹ ನೊಂದಣಾಧಿಕಾರಿ ನಿರಾಕರಿಸಿದ್ದಾರೆ.
ವಿಷಯವೆಂದರೆ ಈ ಇಬ್ಬರೂ ಕಾಲೇಜಿಗೆ ಹೋಗುತ್ತಿದ್ದಾಗಲೇ ಪರಸ್ಪರ ಆಕರ್ಷಿತರಾಗಿದ್ದರು. ಇಬ್ಬರಲ್ಲೂ ಪ್ರೀತಿ ಮೂಡಿತ್ತು.ಈ ವಿಚಾರ ಮನೆಯವರಿಗೆ ತಿಳಿದು ಇಬ್ಬರನ್ನೂ ಕಾಲೇಜಿಗೆ ಹೋಗಗೊಡದೆ ನಿರ್ಬಂಧಿಸಿದ್ದಾರೆ.ಹಾಗಾಗಿ ವಿದ್ಯಾಭ್ಯಾಸ ಅರ್ಧಕ್ಕೇ ನಿಂತಿತ್ತು. ಆ ಬಳಿಕ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ವರ ನೋಡಿ ವಿವಾಹವನ್ನೂ ಮಾಡಿದ್ದಾರೆ.
ಇಷ್ತಾದರೂ ಇಬ್ಬರಿಗೂ ಪರಸ್ಪರ ಪ್ರೀತಿ, ಆಕರ್ಷಣೆ ಕಡಿಮೆಯಾಗಿರಲಿಲ್ಲ. ಇದೇ ಕಾರಣಕ್ಕೆ ಆರು ವರ್ಷಗಳ ಬಳಿಕ ತಮ್ಮ ಗಂಡನಿಗೆ ವಿಚ್ಚೇದನ ನೀಡಿ ವಿವಾಹವಾಗಿದ್ದಾಗಿ ನವಜೋಡಿ ಹೇಳಿಕೊಂಡಿದೆ
ಸಲಿಂಗಿ ಜೋಡಿಯ ಪರ ವಕೀಲರಾದ ಶಂಕರ್ ತಿವಾರಿ ಮಾತನಾಡಿ, ಒಂದೇ ಲಿಂಗದವರ ವಿವಾಹ ನೋಂದಣಿಗೆ ಯಾವುದೇ ಸರ್ಕಾರಿ ಆದೇಶ ಇಲ್ಲ ಎಂಬ ಕಾರಣ ನೀಡಿ ನೊಂದಣಿ ಅಧಿಕಾರಿಗಳು ವಿವಾಹ ನೊಂದಣಿಗೆ ನಿರಾಕರಿಸಿದ್ದಾರೆ. ಇದು ತಪ್ಪು ಎಂದಿದ್ದಾರೆ.
ಕಳೆದ ವರ್ಷ ಸರ್ವೋಚ್ಚ ನ್ಯಾಯಾಲತ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ನ್ನು ರದ್ದುಗೊಳಿಸಿ ಆದೇಶಿಸಿದ್ದು ಸಲಿಂಗಿಗಳು ಸಹಜೀವನ ನಡೆಸಲು ಅವಕಾಶ ಕ;ಲ್ಪಿಸಿದೆ. ಆದರೆ ಸಲಿಂಗಿಗಳ ಅಥವಾ ಹೆಣ್ಣು-ಹೆಣ್ಣಿನ ವಿಇವಾಹಕ್ಕೆ ಭಾರತೀಯ ಕಾನೂನಿನಡಿ ಮಾನ್ಯತೆ ಇರುವುದಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos