ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

2019 ಚುನಾವಣೆ: ಪ್ರಧಾನಿ ಕ್ಷೇತ್ ಬದಲಾವಣೆ? ಮೋದಿ ಆಯ್ಕೆ ಮಾಡಬಹುದಾದ ಆ ಕ್ಷೇತ್ರ ಯಾವುದು?

2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿರುವ ಲೋಕಸಭಾ ಕ್ಷೇತ್ರ ಬದಲಾವಣೆಯಾಗಲಿದೆಯೇ? ಹೀಗೊಂದು ಊಹಾಪೋಹ ಸೃಷ್ಟಿಯಾಗಿದೆ.

ಮೋದಿ
Srinivas Rao BV
Updated On : 3 Jan 2019, 12:43 pm
ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿರುವ ಲೋಕಸಭಾ ಕ್ಷೇತ್ರ ಬದಲಾವಣೆಯಾಗಲಿದೆಯೇ? ಹೀಗೊಂದು ಊಹಾಪೋಹ ಸೃಷ್ಟಿಯಾಗಿದೆ. 
ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ಪ್ರದೀಪ್ ಪುರೋಹಿತ್ ಈ ಬಗ್ಗೆ ಸುಳಿವು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುವುದರ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದ ಪ್ರಧಾನಿ ಮೋದಿ, ಇವೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದಿದ್ದರು. 

Advertisement

Advertisement

ಆದಾಗ್ಯೂ ಪ್ರದೀಪ್ ಪುರೋಹಿತ್ ಈ ಬಗ್ಗೆ ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಒಡಿಶಾದ ಜನತೆಯನ್ನು ಪ್ರೀತಿಸುತ್ತಾರೆ. ಆದ್ದರಿಂದ ಅವರು ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳು ಶೇ.90 ರಷ್ಟಿವೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement