ಗಂಟಲು ಸ್ವಚ್ಛ ಮಾಡಿಕೊಳ್ಳಲು ಹೋಗಿ ಟೂತ್ ಬ್ರಷ್ ನ್ನೇ ನುಂಗಿದ ಭೂಪ! 
ದೇಶ

ಗಂಟಲು ಸ್ವಚ್ಛ ಮಾಡಿಕೊಳ್ಳಲು ಹೋಗಿ ಟೂತ್ ಬ್ರಷ್ ನ್ನೇ ನುಂಗಿದ ಭೂಪ!

36 ವರ್ಷದ ವ್ಯಕ್ತಿ ಗಂಟಲು ಭಾಗವನ್ನು ಸ್ವಚ್ಛ ಮಾಡಿಕೊಳ್ಳಲು ಹೋಗಿ ಟೂತ್ ಬ್ರಷ್ ನ್ನೇ ನುಂಗಿ ಎಡವಟ್ಟು ಮಾಡಿಕೊಂಡಿದ್ದಾನೆ.

ನವದೆಹಲಿ: 36 ವರ್ಷದ ವ್ಯಕ್ತಿ ಗಂಟಲು ಭಾಗವನ್ನು ಸ್ವಚ್ಛ ಮಾಡಿಕೊಳ್ಳಲು ಹೋಗಿ ಟೂತ್ ಬ್ರಷ್ ನ್ನೇ ನುಂಗಿ ಎಡವಟ್ಟು ಮಾಡಿಕೊಂಡಿದ್ದಾನೆ. 
ದೆಹಲಿಯ ಸೀಮಾಪುರಿಯ ನಿವಾಸಿ ಅವೀದ್ ಎಂಬಾತ ಬ್ರಷ್ ನ್ನು ಆಕಸ್ಮಿಕವಾಗಿ ನುಂಗಿದ್ದು ಏಮ್ಸ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಇಲ್ಲದೇ ಬ್ರಷ್ ನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 12 ಸೆಂಟೀಮೀಟರ್ ಇದ್ದ ಟೂತ್ ಬ್ರಷ್ ನ್ನು ಎಂಡೋಸ್ಕೊಪಿ ಮೂಲಕ ಹೊರತೆಗೆಯಲಾಗಿದೆ. 
ಘಟನೆ ನಡೆದ ತಕ್ಷಣ ವ್ಯಕ್ತಿ ಟೂತ್ ಬ್ರಷ್ ನ್ನು ನುಂಗಿದ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಮರುದಿನ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಹತ್ತಿರದಲ್ಲೇ ಇದ್ದ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಅಲ್ಲಿಯೂ ಟೂತ್ ಬ್ರಷ್ ನ್ನು ನುಂಗಿದ ವಿಷಯವನ್ನು ಬಹಿರಂಗಪಡಿಸಲಿಲ್ಲ. ಪ್ರಾಥಮಿಕ ಚಿಕಿತ್ಸೆ ಕೆಲಸ ಮಾಡದೇ ಇದ್ದಾಗ ಎಕ್ಸ್ ರೇ ತೆಗೆಸಲಾಯಿತು, ಈ ವೇಳೆ ಯಾವುದೋ ವಸ್ತುವೊಂದು ಸಿಲುಕಿರುವುದು ಪತ್ತೆಯಾಗಿದೆ. ಈ ಬಳಿಕ ತೂಟ್ ಬ್ರಷ್ ನ್ನು ನುಂಗಿದ್ದನ್ನು ಅವೀದ್ ಬಹಿರಂಗಪಡಿಸಿದ್ದಾರೆ.  ನಂತರ ಏಂಡೋಸ್ಕೊಪಿಗಾಗಿ ಆತನನ್ನು ಏಮ್ಸ್ ಗೆ ಕರೆದೊಯ್ಯಲಾಗಿದ್ದು ವೈದ್ಯರು ಶಸ್ತ್ರಚಿಕಿತ್ಸೆ ಇಲ್ಲದೇ ಬ್ರಷ್ ನ್ನು ಹೊರತೆಗೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್