ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಅವರಿಗೆ ಮತ ನೀಡುವಂತೆ ಮನವಿ
ಸೂರತ್: ಸೂರತ್ ನಲ್ಲಿ ವಿವಾಹವಾಗುತ್ತಿರುವ ಜೋಡಿಗಳು ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿರುವ ವಿಶೇಷ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕೆಲವೊಮ್ಮೆ ವಿವಾಹ ಆಮಂತ್ರಣ ಪತ್ರಿಕೆಗಳಲ್ಲಿ ಯಾವುದೇ ಉಡಗೊರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಮುದ್ರಿಸಲಾಗಿರುತ್ತದೆ., ಆದರೆ ಸೂರತ್ ನ ದವಲ್ ಮತ್ತು ಜಯಾ ಜೋಡಿಯ ಆಹ್ವಾನ ಪತ್ರಿಕೆಯಲ್ಲಿ ಮತವನ್ನು ಉಡುಗೊರೆಯಾಗಿ ಕೇಳಿದ್ದಾರೆ. ಮೋದಿಗೇ ನಿಮ್ಮ ಮತ, ಅದೇ ನಮಗೆ ಉಡುಗೊರೆ ಎಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ವಧು ವರರು ಸಂದೇಶ ನೀಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ನೀಡಬೇಕು ಎಂದು ಮೋದಿ ಪರ ಪ್ರಚಾರ ಮಾಡಿದ್ದಾರೆ. ಮೋದಿ ಪರ ಪ್ರಚಾರವನ್ನು ಕೇವಲ ಸೂರತ್ ದಂಪತಿ ಮಾತ್ರ ಮಾಡಿಲ್ಲ, ಮಂಗಳೂರಿನ ಮತ್ತೊಬ್ಬ ಮೋದಿ ಬೆಂಬಲಿಗರೊಬ್ಬರು ಇದೇ ರೀತಿಯ ಮನವಿ ಮಾಡಿದ್ದಾರೆ.
ನಿಹಾಲ್ ಕುಮಾರ್ ಮತ್ತು ಅಂಕಿತಾ ಎಂಬ ದಂಪತಿ ಕೂಡ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವಂತೆ ಕೋರಿದ್ದಾರೆ, ಕಳೆದ 5 ವರ್ಷಗಳಿಂದ ಮೋದಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics