ದೇಶ

ಪ್ರಕರಣ ರಾಜಕೀಯಗೊಳಿಸಲಾಗಿದೆ, ಭಾರತಕ್ಕೆ ಬಂದರೆ ಜೀವಕ್ಕೆ ಆಪಾಯ: ನೀರವ್‌ ಮೋದಿ

Lingaraj Badiger
ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ)ಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಸುರಕ್ಷತೆಯ ಭಯದಿಂದಾಗಿ ಭಾರತಕ್ಕೆ ಮರಳುವುದಿಲ್ಲ ಎಂದು ಶನಿವಾರ ಮುಂಬೈ ಕೋರ್ಟಿಗೆ ತಿಳಿಸಿದ್ದಾರೆ.
ಪ್ರಾಣ ಬೆದರಿಕೆ ಇರುವ ಕಾರಣ ನಾನು ಭಾರತಕ್ಕೆ ಬರುವುದಿಲ್ಲ. ಮೇಲಾಗಿ ನನ್ನ ವಿರುದ್ಧದ ಪ್ರಕರಣವನ್ನು ರಾಜಕೀಯಗೊಳಿಸಲಾಗಿದೆ ಎಂದು ನೀರವ್ ಮೋದಿ ಇಂದು ತಮ್ಮ ವಕೀಲರ ಮೂಲಕ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರ್ಥಿಕ ಅಪರಾಧಿಗಳ ನೂತನ ಕಾಯಿದೆಯಡಿ ನೀರವ್‌ ಮೋದಿಯನ್ನು 'ತಲೆಮರೆಸಿಕೊಂಡ ಆರ್ಥಿಕ ಅಪರಾಧಿ' ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ವೇಳೆ ನೀರವ್ ಪರ ವಕೀಲ ಕೋರ್ಟಿಗೆ ಈ ಮಾಹಿತಿ ನೀಡಿದ್ದಾರೆ. 
ಪ್ರತಿಕೃತಿಗಳನ್ನು ದಹಿಸುವಂತಹ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ನೀರವ್ ಮೋದಿ ಪ್ರಾಣ ಭೀತಿ ಎದುರಿಸುತ್ತಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಇನ್ನು ರಾಜಕೀಯ ಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳು 'ತಮ್ಮನ್ನು ಅಪರಾಧಿ ಎಂದೇ ನಿರ್ಣಯಿಸಿದಂತಿದೆ' ಎಂದು ನೀರವ್ ಮೋದಿ ತಮ್ಮ ವಕೀಲರ ಮೂಲಕ ತಿಳಿಸಿದ್ದಾರೆ. 
SCROLL FOR NEXT