ದೇಶ

ಅತ್ಯಾಚಾರ ಯತ್ನಆರೋಪ: ಐಐಟಿ ಗುವಾಹತಿಯಲ್ಲಿ ಕರ್ನಾಟಕದ ಪ್ರಾಧ್ಯಾಪಕನ ಬಂಧನ

Lingaraj Badiger
ಗುವಾಹತಿ: ಲೈಂಗಿಕ ಕಿರುಕುಳ ನೀಡಿದ ಹಾಗೂ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಐಐಟಿ ಗುವಾಹತಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಕರ್ನಾಟಕ ಮೂಲದ ಪ್ರೊ.ಕೆ.ವಿ. ಶ್ರೀಕಾಂತ್ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳಿಂದ ಪರಿಚತರಾಗಿದ್ದ ಮಹಿಳೆಯೊಬ್ಬರು ಶ್ರೀಕಾಂತ್ ವಿರುದ್ಧ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಪಶ್ಚಿಮ ಅಸ್ತಾಂನ ನಲ್ಬರಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ನಲ್ಬರಿ ಪೊಲೀಸರು ಶ್ರೀಕಾಂತ್ ಅವರನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಐಐಟಿ ಗುವಾಹತಿ ಮೂಲಗಳ ಪ್ರಕಾರ, 45 ವರ್ಷದ ಶ್ರೀಕಾಂತ್ ಅವರು ಅವಿವಾಹಿತರಾಗಿದ್ದು, ಮಹಿಳೆಯೊಬ್ಬರೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದರು. ಆದರೆ ಇತ್ತೀಚಿಗೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆ ಮಹಿಳೆ ಮದುವೆಯಾಗಲು ಬಯಸಿದ್ದಳು. ಮದುವೆ ನಿರಾಕರಿಸಿದ್ದಕ್ಕೆ ಮಹಿಳೆ ದೂರು ದಾಖಲಿಸಿರಬಹುದು ಎನ್ನಲಾಗಿದೆ.
SCROLL FOR NEXT