ಗಣಿಗಾರಿಕೆ ವೇಳೆ ಸಂಭವಿಸಿದ ದುರಂತದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಣೆ ಮಾಡುತ್ತಿರುವ ಸಿಬ್ಬಂದಿಗಳು
ನವದೆಹಲಿ: ಮೇಘಾಲಯಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್'ಜಿಟಿ) ಬರೋಬ್ಬರಿ ರೂ.100 ಕೋಟಿ ದಂಡ ವಿಧಿಸಿದೆ.
ಮೇಘಾಲಯದ ಬಹುತೇಕ ಗಣಿಗಳು ಗುತ್ತಿಗೆ ಕರಾರು ಒಪ್ಪಂದಗಳು ಅಥವಾ ಪರವಾನಗಿಗಳಿಲ್ಲದೇ ಕಾರ್ಯನಿರ್ವಹಿಸುತ್ತಿರುವುದಾಗಿ ಉನ್ನತಮಟ್ಟದ ಸಮಿತಿ ವರದಿಯಲ್ಲಿ ತಿಳಿಸಿದ ಹಿನ್ನಲೆಯಲ್ಲಿ ಹಸಿರು ನ್ಯಾಯಮಂಡಳಿ ಭಾರೀ ದಂಡವನ್ನು ವಿಧಿಸಿದೆ.
ಉನ್ನತ ಮಟ್ಟದ ಸಮಿತಿ ವರದಿಯನ್ನು ಎನ್'ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ ಗೋಯಲ್ ಅವರ ನೇತೃತ್ವದ ಪೀಠಕ್ಕೆ ಸಲ್ಲಿಸಿದಲಾಗಿ ಎಂದು ನ್ಯಾಯಮಂಡಳಿಗೆ ನೆರವು ನೀಡುತ್ತಿರುವ ಹಿರಿಯ ವಕೀಲರೊಬ್ಬರು ಹೇಳಿದ್ದಾರೆ.
ಸರ್ಕಾರಕ್ಕೆ ರೂ.100 ಕೋಟಿ ದಂಡ ವಿಧಿಸಿದ್ದರೂ, ಅದನ್ನು ಸರ್ಕಾರವೇ ಕಟ್ಟಬೇಕಿಲ್ಲ. ಅದನ್ನು ಯಾವ ಮೂಲದಿಂದ ಸಂಗ್ರಹಿಸಬೇಕೆಂಬ ಮಾರ್ಗವನ್ನು ಇದೇ ವೇಳೆ ನ್ಯಾಯಮಂಡಳಿ ಸ್ಪಷ್ಟವಾಗಿ ತಿಳಿಸಿದೆ.
ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅದನ್ನು ಕಂಡೂ ಕಾಣದಂತಿರುವ ಸರ್ಕಾರಿ ಅಧಿಕಾರಿಗಳಿಂದ ರೂ.100 ಕೋಟಿ ಸಂಗ್ರಹಿಸಿ. 2 ತಿಂಗಳಿಲ್ಲಿ ಹಣ ಸಂಗ್ರಹಿಸಿ ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ಜಮೆ ಮಾಡಬೇಕೆಂದು ನ್ಯಾಯಾಲಯದ ಆದೇಶಿಸಿದೆ.
ಮೇಘಾಲಯದ ಪಶ್ಚಿಮ ಜೈಂತಿಯಾ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯೊಳಗೆ ಡಿ.13 ರಂದು ನೀರು ತುಂಬಿಕೊಂಡ ಪರಿಣಾಮ 15 ಮಂದಿ ಕಾರ್ಮಿಕರು ಸಿಲುಕಿಗೊಂಡಿದ್ದರು. ಅವರನ್ನು ಈ ವರೆಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಈಗಲೂ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈ ನಡುವೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೂಡ ಮಧ್ಯಪ್ರವೇಶಿಸಿದೆ. ಇದೀಗ ಎನ್'ಜಿಟಿ ಮೇಘಾಲಯ ಸರ್ಕಾರಕ್ಕೆ ದಂಡವನ್ನು ವಿಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics