ಸಂಗ್ರಹ ಚಿತ್ರ 
ದೇಶ

ಹಿಂದುತ್ವ ನಂಬುವವರ ಜೊತೆಗಲ್ಲ, ಇವಿಎಂ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತದೆ: ಶಿವಸೇನೆ

ಹಿಂದುತ್ವ ನಂಬುವ ಜನರ ಜೊತೆಗಲ್ಲ, ಇವಿಎಂ ಜೊತೆಗೆ ಬಿಜೆಪಿ ಮಾತ್ರಿ ಮಾಡಿಕೊಳ್ಳತ್ತದೆ ಎಂದು ಶಿವಸೇನೆ ಸೋಮವಾರ ಹೇಳಿದೆ...

ಲಾತೂರ್ (ಮಹಾರಾಷ್ಟ್ರ): ಹಿಂದುತ್ವ ನಂಬುವ ಜನರ ಜೊತೆಗಲ್ಲ, ಇವಿಎಂ ಜೊತೆಗೆ ಬಿಜೆಪಿ ಮಾತ್ರಿ ಮಾಡಿಕೊಳ್ಳತ್ತದೆ ಎಂದು ಶಿವಸೇನೆ ಸೋಮವಾರ ಹೇಳಿದೆ. 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ವಕ್ತಾರ, ಹಿಂದುತ್ವ ನಂಬುವ ಜನರ ಪರವಲ್ಲ, ಇವಿಎಂ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತದೆ ಎಂಬುದು ಅಮಿತ್ ಶಾ ಅವರ ಹೇಳಿಕೆಯಿಂದ ಸ್ಪಷ್ಟಪಡಿಸುತ್ತಿದೆ. ಅಮಿತ್ ಶಾ ಅವರ ಪ್ರಚೋದನಾತ್ಮಕ ಹೇಳಿಕೆಯಿಂದ ಅವರ ಪಕ್ಷ ಹಾಗೂ ಅವರ ನಿಜ ಬಣ್ಣ ಬಯಲಾಗಿದೆ ಎಂದು ಹೇಳಿದ್ದಾರೆ.  
ಶಿವಸೇನೆ ಮುಖ್ಯಸ್ಥರು ಜನರ ನಂಬಿಕೆ ಹಾಗೂ ಭಾವನೆಗಳನ್ನು ಹೇಳಿದ್ದರು. ಮೊದಲು ಮಂದಿರ, ನಂತರ ಸರ್ಕಾರ ಎಂದಿದ್ದರು. ಈ ಹೇಳಿಕೆಯನ್ನು ಬಿಜೆಪಿ ಪರಿಗಣಿಸಿಲ್ಲ. ಇದೀಗ ಅವರ ನಾಲಿಗೆ ಬದಲಾಗಿದೆ. ಇದರ ಅರ್ಥ ಹಿಂದುತ್ವವನ್ನು ನಂಬಿರುವ ಜನರನ್ನು ಅವರು ನಂಬುವುದಿಲ್ಲ ಎಂಬುದಾಗಿದೆ. ಐದು ರಾಜ್ಯಗಳ ಚುನಾವಣೆ ಬಳಿಕ ಬಿಜೆಪಿ ನೆಲಕಚ್ಚುತ್ತಿದೆ. ಭಾರತದ ಜನರು ಅವರಿಗೆ ಸ್ಥಾನವನ್ನು ತೋರಿಸುತ್ತಿದ್ದಾರೆ. 40 ಸೀಟುಗಳಲ್ಲಿ ಗೆಲುವು ಸಾಧಿಸಬೇಕೆಂದು ಹೇಳುವ ಮೂಲಕ ಬಿಜೆಪಿ ಇವಿಎಂ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಸ್ಪಷ್ಟಪಡಿಸುತ್ತಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ