ಅಖಿಲೇಶ್ ಯಾದವ್ 
ದೇಶ

ಒಂದೇ ದಿನ 13 ಗಣಿಗಾರಿಕೆ ಯೋಜನೆಗೆ ಪರವಾನಗಿ: ಸಿಬಿಐ ನಿಂದ ಅಖಿಲೇಶ್ ಯಾದವ್ ವಿಚಾರಣೆ ಸಾಧ್ಯತೆ

ಅಕ್ರಮ ಗಣಿಗಾರಿಕೆ ಸಂಬಂಧ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಸಿಬಿಐ ಪ್ರಶ್ನಿಸುತ್ತದೆ ಎಂದು ಹೇಳಲಾಗಿದ್ದು ಈ ಕುರಿತಂತೆ ಕಾಂಗ್ರೆಸ್, ಬಿಎಸ್ಪಿ ಹಾಗೂ .....

ಲಖನೌ/ನವದೆಹಲಿ: ಅಕ್ರಮ ಗಣಿಗಾರಿಕೆ ಸಂಬಂಧ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಸಿಬಿಐ ಪ್ರಶ್ನಿಸುತ್ತದೆ ಎಂದು ಹೇಳಲಾಗಿದ್ದು ಈ ಕುರಿತಂತೆ ಕಾಂಗ್ರೆಸ್, ಬಿಎಸ್ಪಿ ಹಾಗೂ ಎಎಪಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ದೂರಿದೆ. 
ಲೋಕಸಭೆಯಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) ಸಂಸದರು ತಮ್ಮ ಪಕ್ಷದ ಮುಖಂಡರನ್ನು ಪ್ರಶ್ನಿಸುವ ಸಾಧ್ಯತೆಯನ್ನು ಖಂಡಿಸಿ ಲೋಕ್ಸಸಭಾಧ್ಯಕ್ಷರ ಎದುರು ಪ್ರತಿಭಟಿಸಿದ್ದಾರೆ.
ಉತ್ತರ ಪ್ರದೇಶದ ಗಣಿಗಾರಿಕೆ ಪ್ರಕರಣದ ಬಗ್ಗೆ ಸಿಬಿಐ ಯಾದವ್ ಅವರನ್ನು ಪ್ರಶ್ನಿಸುತ್ತದೆ ಎಂದು ಹೇಳಲಾಗಿದ್ದು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಂದೇ ದಿನ 13 ಗಣಿ ಯೋಜನೆಗೆ ಅನುಮತಿಸಿದ್ದರೆಂದು ತನಿಖಾ ಸಂಸ್ಥೆ ಆರೋಪಿಸಿದೆ.
ಯಾದವ್ ಅವರು 14 ಗಣಿಗಾರಿಕೆ ಲೀಸ್ ಪತ್ರಗಳನ್ನು ಅನುಮೋದಿಸಿದ್ದರು.  ಇ-ಟೆಂಡರಿಂಗ್ ಪ್ರಕ್ರಿಯೆಯನ್ನು ಉಲ್ಲಂಘಿಸಿ ಫೆಬ್ರವರಿ 17, 2013ರಂದು ಯಾದವ್ ಒಟ್ಟಾರೆ 13 ಗಣಿಗಾರಿಕೆಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಸಿಬಿಐ ಹೇಳಿದೆ.
ತನ್ನ ರಾಜಕೀಯ ಲಾಭಕ್ಕಾಗಿ ಕೇಂದ್ರೀಯ ತನಿಖಾ ಸಂಸ್ಥೆಯನ್ನು ಕೇಂದ್ರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿದ್ದು ಸಿಬಿಐ ಕೇಂದ್ರದ ಪಿತೂರಿಯ ಕಾರಣ ಯಾದವ್ ಪಾತ್ರವನ್ನು ಹೈಲೈಟ್  ಮಾಡಿದೆ ಎಂದು ಅವು ಹೇಳಿದೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಯಾದವ್ ಅವರಿಗೆ ಕರೆ ಮಾಡಿ ತಾವು ಯಾವುದೇ ಕಾರಣಕ್ಕೂ ನಿಮ್ಮ "ಬೆಂಬಲ"ಕ್ಕಿದ್ದೇವೆ ಎಂದು ಭರವಸೆ ನೀಡಿದ್ದಾರೆ.
"ಇಂತಹಾ ಗಿಮಿಕ್ ಗ:ಳಿಂದ ನಮ್ಮ ಮೈತ್ರಿಯನ್ನು ಮುರಿಯಲು ಸಾಧ್ಯವಿಲ್ಲ.ಬಿಜೆಪಿಯ "ರಾಜಕೀಯ ದ್ವೇಷ"ದಿಂದ ಯಾದವ್ ಅವರನ್ನು ಸಿಬಿಐ ಪ್ರಶ್ನಿಸಲು ತೊಡಗುತ್ತಿದೀಂದು ಅವರು ಹೇಳಿದ್ದಾರೆ.ಸಿಬಿಐ ದಾಳಿಗಳು ಮತ್ತು ಗಣಿಗಾರಿಕೆ ಹಗರಣದಲ್ಲಿ ಸಿಬಿಐ ಪ್ರಶ್ನಿಸಲಿದೆ ಎಂಬ ಬೆದರಿಕೆ ರಾಜಕೀಯ ವೈರತ್ವ ಮಾತ್ರವಲ್ಲ, ಇಂತಹ ರಾಜಕೀಯ ಮತ್ತು ರಾಜಕೀಯ ಪಿತೂರಿ ಬಿಜೆಪಿಗೆ ಹೊಸತಲ್ಲ.ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುವುದು ನಮ್ಮ ಗುರಿ'ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಉತ್ತರಪ್ರದೇಶದಲ್ಲಿ ಕೈ ಜೋಡಿಸಲು ಎಸ್ಪಿ ಮತ್ತು ಬಿಎಸ್ಪಿ ಒಂದಾಗಿವೆ."ಈ ಸಿಬಿಐ ಕ್ರಮವು ರಾಜಕೀಯ ಪಿತೂರಿ ಅಲ್ಲವಾದರೆ , ಬಿಜೆಪಿ ಮುಖಂಡರು ಯಾಕೆ ಹೇಳಿಕೆ ನೀಡಿದರು ಮತ್ತು ಬಿಜೆಪಿ ಮುಖಂಡ ಮತ್ತು ಸಚಿವರು ಸಿಬಿಐ ವಕ್ತಾರರಂತೆ ಏಕೆ ವರ್ತಿಸುತ್ತಿದ್ದಾರೆ? ಮಾಯಾವತಿ ಕೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT