ನವದೆಹಲಿ: ಸಿಬಿಐ ಅಧಿಕಾರಿಗಳ ನಡುವಿನ ಸಂಘರ್ಷದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಸಂಬಂಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾತನಾಡಿದ್ದಾರೆ. ಕೇಂದ್ರ ವಿಚಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಸಿಬಿಐನ ಇಬ್ಬರು ಹಿರಿಯ ಅಧಿಕಾರಿಗಳನ್ನು ರಜೆಗೆ ಕಳುಹಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಿದೆ ಎಂದು ಅವರು ಹೇಳಿದ್ದಾರೆ.
ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಜೇಟ್ಲಿ"ಸಿಬಿಐ ಸಮಗ್ರತೆಯ ರಕ್ಷಣೆಗೆ ಸರ್ಕಾರ ಬದ್ದವಾಗಿದೆ. ಇದೇ ಸಲುವಾಗಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ.ಸಿವಿಸಿ ಶಿಫಾರಸಿನ ಮೇಲೆ ಸಿಬಿಐನ ಇಬ್ಬರು ಹಿರಿಯ ಅಧಿಕಾರಿಗಳನ್ನು ರಜೆಯ ಮೇಲೆ ಕಳಿಸಲು ಸರ್ಕಾರವು ಕ್ರಮ ಕೈಗೊಂಡಿದೆ" ಎಂದು ಹೇಳಿದರು. ಅಲೋಕ್ ವರ್ಮಾವನ್ನು ಸಿಬಿಐ ನಿರ್ದೇಶಕ ಹುದ್ದೆಯಲ್ಲಿ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದ್ದ ಬೆನ್ನಲ್ಲಿ ಜೇಟ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಿಬಿಐ ನ ಇಬ್ಬರು ಹಿರಿಯ ಅಧಿಕಾರಿಗಳಾದ ರಾಕೇಶ್ ಅಸ್ತಾನಾ ಹಾಗೂ ಅಲೋಕ್ ವರ್ಮಾ ನಡುವಿನ ಸಂಘರ್ಷ ಕೋರ್ಟ್ ಕಟಕಟೆಗೆ ಏರಿತ್ತು.
ಇದೀಗ ಕೋರ್ಟ್ ಈ ವಿವಾದವನ್ನು ಒಂದು ವಾರದೊಳಗೆ ತೀರ್ಮಾನಿಸಲು ಸಮಿತಿಗೆ ಸೂಚಿಸಿದೆ ಎಂದು ಜೇಟ್ಲಿ ಹೇಳಿದ್ದಾರೆ.