ನವದೆಹಲಿ: ಆಕಾಶವಾಣಿಯಲ್ಲಿ ಪ್ರಸಾರವಾಗುವ ಸುದ್ದಿಯನ್ನು ಖಾಸಗಿ ಎಫ್‌ಎಂ ಚಾನೆಲ್‌ಗಳು ತಮ್ಮ ವಾಹಿನಿಗಳಲ್ಲಿ ಇಂದಿನಿಂದ ಪ್ರಸಾರ ಮಾಡಲಿದೆ.
ಹೌದು.. ಇಷ್ಟು ದಿನ ಸರ್ಕಾರಿ ಸ್ನಾಮ್ಯದ ಆಕಾಶವಾಣಿಯಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ವಾರ್ತಾಪ್ರಸಾರವನ್ನು ಇನ್ನು ಮುಂದೆ ಖಾಸಗಿ ವಾಹಿನಿಗಳಲ್ಲೂ ಪ್ರಸಾರ ಮಾಡಬಹುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಆಕಾಶವಾಣಿಯೊಂದಿಗೆ ಮಾತನಾಡಿದ ರಾಥೋಡ್ ಅವರು, 'ಇದೊಂದು ಪ್ರಮುಖ ಬೆಳವಣಿಗೆ ಈ ಮೂಲಕ ಬೃಹತ್ ಸಮೂಹವನ್ನು ಆಕಾಶವಾಣಿ ಬಹಳ ಸುಲಭವಾಗಿ ಸುದ್ದಿ ಮೂಲಕ ತಲುಪಲಿದೆ ಎಂದರು. ಮಾಧ್ಯಮಗಳಲ್ಲಿ ಮುಖ್ಯ ಪಾತ್ರವಹಿಸಿರುವ ರೇಡಿಯೋ ಮೂಲಕವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಜನಪ್ರಿಯತೆ ಗಳಿಸಿದೆ. ಆಕಾಶವಾಣಿ ಎಫ್‌ಎಂ ವಾಹಿನಿಗಳು ದೇಶದ ಶೇಕಡ 50ರಷ್ಟು ಜನರನ್ನು ತಲುಪುತ್ತಿದೆ. ಹೀಗಾಗಿ ಯುಪಿಎ ಸರ್ಕಾರವು ಜನರನ್ನು ತಲುಪಲು ಮಾಧ್ಯಮಗಳನ್ನೇ ಅತಿ ಹೆಚ್ಚು ಬಳಸಿಕೊಂಡಿದ್ದು,2005ರಿಂದ 2014ರ ಅವಧಿಯಲ್ಲಿ 56 ಕೋಟಿ ಚದರ ಸೆಂಟಿಮೀಟರ್ ವ್ಯಾಪ್ತಿಯನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಲು ಬಳಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಸಂವಿಧಾನದ ಮಾನ್ಯತೆ ಹೊಂದಿರದ ಯುಪಿಎ ಮೈತ್ರಿಕೂಟದ ಅಧ್ಯಕ್ಷರ ಭಾವಚಿತ್ರವನ್ನೂ ಪತ್ರಿಕೆಗಳ ಜಾಹೀರಾತಿನಲ್ಲಿ ನೀಡಲಾಗಿದ್ದು, ಮಾಧ್ಯಮಗಳ ಪ್ರಬಲತೆಯನ್ನು ಅರಿಯಬಹುದು ಎಂದು ರಾಥೋಡ್ ತಿಳಿಸಿದರು.
ಇನ್ನು ಆಕಾಶವಾಣಿಯ ಈ ಬಹು ಉದ್ದೇಶಿತ ಯೋಜನೆ ಇಂದು ಮಧ್ಯಾಹ್ನದಿಂದ ಜಾರಿಗೆ ಬರಲಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ರಾಥೋಡ್ ನವದೆಹಲಿಯಲ್ಲಿ ಇಂದು ಮಧ್ಯಾಹ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos