ದೇಶ

ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳಿಗೆ 2020ರಿಂದ ಎರಡು ಮಟ್ಟದ ಗಣಿತ ಪರೀಕ್ಷೆ!

Vishwanath S
ನವದೆಹಲಿ: 2020ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) ಎರಡು ಮಟ್ಟದ ಗಣಿತ ಪರೀಕ್ಷೆ ನಡೆಸಲು ಮುಂದಾಗಿದೆ. 
ಗಣಿತಶಾಸ್ತ್ರ-ಸ್ಟ್ಯಾಂಡರ್ಡ್ ಅಸ್ತಿತ್ವದಲ್ಲಿರುವ ಮಟ್ಟ ಪರೀಕ್ಷೆ ಮತ್ತು ಗಣಿತಾಶಾಸ್ತ್ರ-ಮೂಲಭೂತ ಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಸಿಬಿಎಸ್ಇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಪ್ರಸ್ತುತ ಲೆವೆಲ್ ಮತ್ತು ಪಠ್ಯಕ್ರಮವು ಅದೇ ರೀತಿ ಮುಂದುವರೆಯಲಿದೆ. 
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪ್ರಕಾರ, ಪರೀಕ್ಷೆಗಳು ಎರಡು ಹಂತಗಳು ವಿಭಿನ್ನ ಕಲಿಯವರಿಗೆ ಸಹಾಯ ಮಾಡುತ್ತದೆ ಮತ್ತು ವಿವಿಧ ಹಂತದ ಪರೀಕ್ಷಗಳನ್ನು ಅನುಮತಿಸುತ್ತದೆ. ಇದು ಒಟ್ಟಾರೆ ವಿದ್ಯಾರ್ಥಿ ಒತ್ತಡ ಮಟ್ಟವನ್ನು ಕಡಿಮೆಗೊಳಿಸುತ್ತದೆ ಎಂದು ವಿವರಿಸಿದೆ.
SCROLL FOR NEXT