ರಾಷ್ಟ್ರೀಯ ತನಿಖಾ ದಳ 
ದೇಶ

ಘಾಜಿಯಾಬಾದ್: ಎನ್ಐಎನಿಂದ ಇಸಿಸ್ ಪ್ರೇರಿತ ಸಂಘಟನೆ 12 ಉಗ್ರರ ಬಂಧನ

ಆತ್ಮಹತ್ಯೆ ದಾಳಿಗಳು ಮತ್ತು ಸರಣಿ ಸ್ಪೋಟಗಳ ಸಂಬಂಧ, ದೆಹಲಿ ಮತ್ತಿತರೆಡೆಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರುಇಯಾಗಿರಿಸಿಕೊಂಡಿದ್ದ ಇಸಿಸ್ ಗುಂಪಿನ ಸದಸ್ಯರನ್ನು .....

ನವದೆಹಲಿ: ಆತ್ಮಹತ್ಯೆ ದಾಳಿಗಳು ಮತ್ತು  ಸರಣಿ ಸ್ಪೋಟಗಳ ಸಂಬಂಧ, ದೆಹಲಿ ಮತ್ತಿತರೆಡೆಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡಿದ್ದ ಇಸಿಸ್ ಗುಂಪಿನ ಸದಸ್ಯರನ್ನು ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಹೇಳಿಕೊಂಡಿದೆ.
ಮೀರತ್, ಹಾಪುರ್ ಮತ್ತು ಘಾಜಿಯಾಬಾದ್ ನಲ್ಲಿ ಶನಿವಾರ ಹಲವರನ್ನು ಬಂಧಿಸಲಾಗಿ, ವಿಚಾರಣೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿದೆ.ಮುಹಮ್ಮದ್ ಅಬ್ಸರ್ (24) ಎಂಬಾತನನ್ನು ಶುಕ್ರವಾರ ರಾತ್ರಿ ಹಾಪುರ್ ನಲ್ಲಿ ಬಂಧಿಸಿದ್ದಾಗಿ ಏಜೆನ್ಸಿಯ ವಕ್ತಾರರು ಮಾಹಿತಿ ನೀಡಿದ್ದಾರೆ. 
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಒಟ್ಟಾರೆ 12 ಜನರನ್ನು ಎನ್ಐಎ ಬಂಧಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಬ್ಸರ್ ಉತ್ತರಪ್ರದೇಶದ ಮೀರತ್ ಜಿಲ್ಲೆಯ ಜಸೊರಾ ನಿವಾಸಿಯಾಗಿದ್ದು ಘಾಜಿಯಾಬಾದ್ ನ ಪಿಪ್ಪಿರಾ ಪ್ರದೇಶದಲ್ಲಿರುವ ಜಾಮಿಯಾ ಹುಸನಿಯಾ ಅಬುಲ್ ಹಾಸನದಲ್ಲಿ ಉಗ್ರ ಚಟುವಟಿಕೆ ತರಬೇತಿ ನೀಡುತ್ತಿದ್ದನೆಂದು ಅವರು ಹೇಳಿದರು. ಅಷ್ಟೇ ಅಲ್ಲದೆ ಅಬ್ಸರ್ ಕಳೆದ ಮೇ-ಆಗಸ್ಟ್ 2018 ರ ನಡುವೆ ಕಾಶ್ಮೀರದ ಮೂರು ಸ್ಥಳಗಳಿಗೆ ಭೇಟಿ ನೀಡಿದ್ದನು. ಇವನೊಡನೆ ಇನ್ನೊಬ್ಬ ಆರೋಪಿಯಾಗಿರುವ ಇಫ್ತಿಕರ್ ಸಕೀಬ್ ಸಹ ಇದ್ದನು, ಇವರಿಬ್ಬರೂ ಭಯೋತ್ಪಾದಕ  ಚಟುವಟಿಕೆ ಸಂಬಮ್ಂಧ ಪಿತೂರಿ ನಡೆಸಲು ಯೋಜಿಸಿದ್ದರು.
ಶನಿವಾರ ಇಲ್ಲಿ ವಿಶೇಷ ಎನ್ಐಎ ನ್ಯಾಯಾಲಯಕ್ಕೆಇವರುಗಳನ್ನು ಹಾಜರುಪಡಿಸುತ್ತಿದ್ದು ಅವರ ನ್ಯಾಯಾಂಗ ಬಂಧನಕ್ಕಾಗಿ ಮನವಿ ಸಲ್ಲಿಸಲಾಗಿದೆ.ಈ ಆರೋಪಿಗಳು ಜಾಗತಿಕ ಭಯೋತ್ಪಾದಕ ಸಮೂಹ ಇಸಿಸ್ ನ  'ಹರ್ಕಾತ್ ಉಲ್ ಹರಬ್ ಇಸ್ ಇಸ್ಲಾಂ' ಘಟಕದ ಭಾಗವಾಗಿದ್ದರೆಂದ್ಯು ಎನ್ಐಎ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT