ಚಂಡೀಗಢ: ಸಂಬಂಧದಲ್ಲಿ ಅಣ್ಣನಾಗಬೇಕಾಗಿದ್ದವನನ್ನೇ ವಿವಾಹವಾಗಿದ್ದ ಯುವತಿಗೆ ಆಕೆಯ ತಾಯಿ ಹಾಗೂ ಕುಟುಂಬದವರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿದೆ.
ಅಮಂದೀಪ್ ಕೌರ್ ಎಂಬಾಕೆಯೇ ಹಲ್ಲೆಗೊಳಗಾದ ಯುವತಿ. ಧಾನಾಸ್ ಮೂಲದವಳಾದ ಈಕೆ ಪಟಿಯಾಲಾ ನಿವಾಸಿ ಜಸ್ವಿಂದರ್ ಸಿಂಗ್ ಎಂಬಾತನನ್ನು ವಿವಾಹವಾಗಿದ್ದಳು.018ರ ಮಾರ್ಚ್ 21ರಂದು ಈ ವಿವಾಹ ನೆರವೇರಿದೆ.ಆದರೆ ಸಂಬಂಧದಲ್ಲಿ ಅಣ್ಣ-ತಂಗಿಯಾಗಬೇಕಿದ್ದ ಇವರ ವಿವಾಹಕ್ಕೆ ಆಕೆಯ ಮನೆಯವರ ಒಪ್ಪಿಗೆ ಇರಲಿಲ್ಲ.
ವಿವಾಹದ ಬಳಿಕ ದಂಪತಿಗಳು ನಾನ್ಯೂಲ ಗ್ರಾಮದಲ್ಲಿ ವಾಸವಿದ್ದರು.ಅಮಂದೀಪ್ ಪತಿ ಜಸ್ವಿಂದರ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಜನವರಿ 9ರಂದು ಅಮಂದೀಪ್ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಸೋದರ ಪ್ರದೀಪ್ ಸಿಂಗ್, ಹಾಗೂ ಪತಿಯ ಸೋದರ ಸಂಬಂಧಿ ಕಮಲ್ಜೀತ್ ಸಿಂಗ್, ಅವರ ಸ್ನೇಹಿತ ಸುಖ್‍ದೀಪ್ ಸಿಂಗ್ ಮತ್ತು ಚಿಕ್ಕಪ್ಪ ಕಾಕಾ ಸಿಂಗ್ ಸೇರಿ ಹಲವರು ಮನೆಗೆ ನುಗ್ಗಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಆ ವೇಳೆ ಅಮಂದೀಪ್ ಕೌರ್ ತಾಯಿ ಸಹ ಅವಳ ಹಿಂದಿನಿಂಡ ಬಂದು ಮಗಳ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದಾಳೆ.ಮುಂದಿನಿಂದ ಪ್ರದೀಪ್ ಹಾಗೂ ಜಸ್ಮನ್ಪ್ರೀತ್ ಆಕೆಯ ಕೈ ಕಾಲುಗಳನ್ನು ಒತ್ತಿ ಹಿಡಿದು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ವಿವಾಹವಾದಂದಿನಿಂದ ಆಕೆಯ ಕುಟುಂಬದವರು ಅವಳಿಗೆ ಬೆದರಿಕೆ ಹಾಕುತ್ತಿದ್ದರೆನ್ನಲಾಗಿದ್ದು ಇದೀಗ ನೇರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕೌರ್ ಪೋಲೀಸರಿಗೆ ದೂರು ಕೊಟ್ಟಿದ್ದಾಳೆ.
ಗಂಭೀರ ಗಾಯಗೊಂಡಿರುವ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಇದೀಗ ಹೆಚ್ಚುವರಿ ಚಿಕಿತ್ಸೆಗಾಗಿ ಚಂಡೀಗಢಕ್ಕೆ ಕರೆದೊಯ್ಯಲಾಗಿದೆ.
ಘಟನೆ ಸಂಬಂಧ ಅಂಬಾಲಾ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರು ಮಂದಿಯನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos