ದೇಶ

ಬುಲಂದ್ ಶಹರ್ ಹತ್ಯೆ ಪ್ರಕರಣ: 7 ಮಂದಿ ಬಂಧಿತರ ವಿರುದ್ಧ ಎನ್ಎಸ್ಎ ಕೇಸು ದಾಖಲು

Raghavendra Adiga
ಬುಲಂದ್ ಶಹರ್(ಉತ್ತರಪ್ರದೇಶ)(: ಕಳೆದ ತಿಂಗಳು ಸಿಯಾನಾ ತೆಹ್ಸಿಲ್ ನಲ್ಲಿ ನಎದಿದ್ದ ಗೋಹತ್ಯೆ ಪ್ರಕರಣ ಸಂಬಂಧ ಬುಲಂದ್ ಶಹರ್ ಜಿಲ್ಲಾಡಳಿತ  ಏಳು ಮಂದಿ ಬಂಧಿತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಡಿಸೆಂಬರ್ 3ರಂದು ನಡೆದ ಘಟನೆಯಲ್ಲಿ ಗೋಹತ್ಯೆ ನಂತರ ನಡೆದ ಗಲಭೆ ವೇಳೆ ಪೋಲೀಸ್ ಅಧಿಕಾರಿಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದರು.

ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್(44), ಹಾಗೂ ಚಿಂಗ್ರಾವತಿ ಗ್ರಾಮದ ನಾಗರಿಕೆ ಸುಮಿತ್ ಕುಮಾರ್(20),  ಹಿಂಸಾಚಾರದಲ್ಲಿ ಗುಂಡಿನ ದಾಳಿಗೆ ಸಿಕ್ಕು ಸಾವನ್ನಪ್ಪಿದ್ದರು. 

ಘಟನೆ ಕುರಿತು ಎರಡು ಪ್ರತ್ಯೇಕ ಎಫ್ಐಆರ್ ಗಳನ್ನು ದಾಖಲಿಸಲಾಗಿದ್ದು 7 ಜನ ಆರೋಪಿಗಳು ಹೇಳಿದಂತೆ  80ಕ್ಕೂ ಹೆಚ್ಚು ಮಂದಿ ಗೋಹತ್ಯೆ ನಂತರ ನಡೆದ ಹಿಂಸಾಚಾರಗಳಲ್ಲಿ ಭಾಗಿಗಳಾಗಿದ್ದಾರೆ. ಇದೀಗ ಗೋ ಹತ್ಯೆ ಪ್ರಕರಣದಲ್ಲಿ ಬಂಧಿಗಳಾದವರ ಮೇಲೆ ಎನ್ಎಸ್ಎ ಅಡಿ ಪ್ರಕರಣ ದಾಖಲಿಸಿರುವುದು ಸತ್ಯ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಝಾ ಪಿಟಿಐಗೆ ತಿಳಿಸಿದ್ದಾರೆ.
SCROLL FOR NEXT