ಈಶಾನ್ಯದಲ್ಲಿ ಬಿಜೆಪಿಗೆ ಮತ್ತೊಂದು ಅಘಾತ: ಬಿಜೆಪಿ ತೊರೆದ ಮಾಜಿ ಸಿಎಂ ಅಪಾಂಗ್ 
ದೇಶ

ಈಶಾನ್ಯದಲ್ಲಿ ಬಿಜೆಪಿಗೆ ಮತ್ತೊಂದು ಅಘಾತ: ಬಿಜೆಪಿ ತೊರೆದ ಮಾಜಿ ಸಿಎಂ ಅಪಾಂಗ್: ಕಾರಣ ಏನು ಗೊತ್ತೇ?

ಅಸ್ಸಾಂ ನಂತರ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಹಿನ್ನಡೆಯುಂಟಾಗಿದ್ದು, ಬಿಜೆಪಿಯಲ್ಲಿದ್ದ ಮಾಜಿ ಸಿಎಂ ಗೆಗಾಂಗ್ ಅಪಾಂಗ್ ಪಕ್ಷ ತೊರೆದಿದ್ದಾರೆ.

ಅರುಣಾಚಲ ಪ್ರದೇಶ: ಅಸ್ಸಾಂ ನಂತರ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಹಿನ್ನಡೆಯುಂಟಾಗಿದ್ದು, ಬಿಜೆಪಿಯಲ್ಲಿದ್ದ ಮಾಜಿ ಸಿಎಂ ಗೆಗಾಂಗ್ ಅಪಾಂಗ್ ಪಕ್ಷ ತೊರೆದಿದ್ದಾರೆ. 
ಈಗಿನ ಬಿಜೆಪಿಯನ್ನು ನೋಡಲು ನನಗೆ ಬೇಸರವಾಗುತ್ತಿದೆ. ಈಗಿನ ಬಿಜೆಪಿ ಮಾಜಿ ಪ್ರಧಾನಿ ವಾಜಪೇಯಿ ಅವರ ಸಿದ್ಧಾಂತಗಳನ್ನು ಪಾಲಿಸುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಬಿಜೆಪಿ ಈಗ ಅಧಿಕಾರ ಹಿಡಿಯುವ ವೇದಿಕೆಯಾಗಿದೆ. ವಿಕೇಂದ್ರೀಕರಣ ಹಾಗೂ ಪ್ರಜಾಪ್ರಭುತ್ವದ ಪರ ನಿರ್ಧಾರಗಳನ್ನು ಕೈಗೊಳ್ಳುವುದನ್ನ ಇಷ್ಟಪಡದ ನಾಯಕತ್ವವಾಗಿ ಬಿಜೆಪಿ ಬೆಳೆಯುತ್ತಿದೆ. 
2014 ರಲ್ಲಿ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಜನಾದೇಶ ಸಿಗಲಿಲ್ಲ. ಆದರೂ ಸಹ ತಂತ್ರಗಾರಿಕೆ ಬಳಸಿ ತನ್ನ ಸರ್ಕಾರ ಸ್ಥಾಪಿಸಿತು ಎಂದು ಗೆಗಾಂಗ್ ಅಪಾಂಗ್ ಬೇಸರ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!