ದೇಶ

ನೂತನ ಸಿಬಿಐ ನಿರ್ದೇಶಕರ ನೇಮಕಕ್ಕೆ ಜ.24ಕ್ಕೆ ಪ್ರಧಾನಿ ನೇತೃತ್ವದ ಸಭೆ

Raghavendra Adiga
ನವದೆಹಲಿ: ಸಿಬಿಐ ಗೆ ನೂತನ ಮುಖ್ಯಸ್ಥರನ್ನು ನೇಮಕ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿ ಜನವರಿ 24ರಂದು ಸಭೆ ಸೇರಲಿದೆ ಎಂದು ಮೂಲಗಳು ಹೇಳಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಮಿತಿಯ ಮುಖ್ಯಸ್ಥಸ್ಥರಾಗಿರಲಿದ್ದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಹಾಗೂ ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆ ಸಮಿತಿಯ ಇನ್ನಿತರೆ ಸದಸ್ಯರಾಗಿದ್ದಾರೆ.
ಈ ಮುನ್ನ ಜನವರಿ 21ರಂದು ಸಭೆ ಕರೆಯುವುದಾಗಿ ಸರ್ಕಾರ ಹೇಳಿತ್ತು. ಆದರೆ ಖರ್ಗೆ ಜನವರಿ 24 ಅಥವಾ 25ರಂದು ಸಭೆ ನಡೆಯಬೇಕೆಂದು ಕೇಳಿದ್ದರು.
ಕಳೆದ ವಾರ ಸಿಬಿಐ ಮುಖ್ಯಸ್ಥರಾದ ಅಲೋಕ ವರ್ಮಾ ಅವರನ್ನು ರಾತ್ರೋರಾತ್ರಿ ಅಗ್ನಿಶಾಮಕ ದಳ ಡಿಜಿ ಆಗಿ ವರ್ಗಾವಣೆಗೊಳಿಸಿದ್ದ ಸರ್ಕಾರ ಹೊಸ ಸಿಬಿಐ ನಿರ್ದೇಶಕನನ್ನು ಆಯ್ಕೆ ಮಾಡಲು ಜನವರಿ 24ರ ದಿನಾಂಕವನ್ನು ಅಂತಿಮಗೊಳಿಸಿದೆ.
ಪ್ರಸ್ತುತ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರ ರಾವ್ ಸಿಬಿಐ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಸಿಬಿಐ ನಂತಹಾ ಮಹತ್ವದ ಸಂಸ್ಥೆಗೆ ತಕ್ಷಣ ಖಾಯಂ ಮುಖ್ಯಸ್ಥರ ನೇಮಕ ಂಆಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಅಲ್ಲದೆ ಇತ್ತೀಚೆಗೆ ನಡೆದ ಆಯ್ಕೆ ಸಮಿತಿ ಸಭೆಯಲ್ಲಿನ ತೀರ್ಮಾನ, ಹಾಗೂ ನಾಗೇಶ್ವರರಾವ್ ನೇಮಕ "ಕಾನೂನುಬಾಹಿರ" ಎಂದು ಖರ್ಗೆ ಪ್ರಧಾನಿಗೆ ಪತ್ರ ಬರೆದು ವಿವರಿಸಿದ್ದಾರೆ.
SCROLL FOR NEXT