ದೇಶ

ಹೀಗೊಂದು 'ಬಂಧನ' ಕ್ಲೈಮ್ಯಾಕ್ಸ್: ನವಜಾತ ಶಿಶುವಿಗೆ ಜೀವನೀಡಿದ ಕೆಲವೇ ಕ್ಷಣದಲ್ಲಿ ಪ್ರಾಣ ಬಿಟ್ಟ ವೈದ್ಯ!

Raghavendra Adiga
ಕೋಲ್ಕತ್ತಾ: ಡಾ. ವಿಷ್ಣುವರ್ಧನ್ ಅವರ "ಬಂಧನ" ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ನೆನಪಿದೆಯೆ? ವೈದ್ಯನೊಬ್ಬ ನವಜಾತ ಮಗುವಿಗೆ ಉಸಿರು ನಿಡಿ ತಾನು ಸಾವನ್ನಪ್ಪುವ ಆ ಕರುಣಾಜನಕ ದೃಶ್ಯ ಸಿನಿಮಾ ವೀಕ್ಷಕ್ಕರ ಕಣ್ಣು ಒದ್ದೆ ಮಾಡಿತ್ತು. ಆದರೆ ಇದೀಗ ಅಂತಹದೇ ಘಟನೆಯೊಂದು ನೈಜಜೀವನದಲ್ಲಿಯೂ ನಡೆದಿದೆ. ಪಶ್ಚಿಮ ಬಂಗಾಳ ಪೂರ್ವ ಮಿಡ್ನಾಪುರ್ ಜಿಲ್ಲೆ ಪಟಂಡದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ನವಜಾತ ಶಿಶುವಿನ ಪ್ರಾಣ ಉಳಿಸಿದ ಕೆಲ ನಿಮಿಷಗಲಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೃತ ವೈದ್ಯಾಧಿಕಾರಿಯನ್ನು ಬಿಭಾಸ್ ಖುಟಿಯಾ (೪೮) ಎಂದು ಗುರುತಿಸಲಾಗಿದೆ. ಪಟಂಡಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಲ್ ಡ್ಯೂಟಿ ವುದ್ಯಾಧಿಕಾರಿಯಾಗಿದ್ದ ಖುಟಿಯಾ ಸೋನಾಲಿ ಕುಲಿಯಾ ಮಜಿ ಎಂಬಾಕೆಯ ಆರೈಕೆ ನಡೆಸಿದ್ದರು. 
ಆಕೆ ಬೆಳಿಗ್ಗೆ ಹನ್ನೊಂದಕ್ಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ.ಆದರೆ ಮಗು ಹುಟ್ಟಿದ ತಕ್ಷಣ ಅಳದಿ ಇದ್ದ ಕಾರಣ ವೈದ್ಯ ಖುಟಿಯಾ ,ಅಗುವನ್ನು ವಾರ್ಮರ್ ನಲ್ಲಿಟ್ಟು ಹೃದಯಕ್ಕೆ ಪಂಪ್ ಮಾಡುವ ಮೂಲಕ ಜೀವ ರಕ್ಷಿಸಿದ್ದಾರೆ. ಹೀಗೆ ಮಾಡಿದ ಕೆಲವೇ ನಿಮಿಷಗಳಲ್ಲಿ ವೈದ್ಯಾಧಿಕಾರಿ ತಾವು ಹೆರಿಗೆ ಕೋಣೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.ಆಗ ಅಲ್ಲಿದ್ದ ಅವರ ಸಹೋದ್ಯೋಗಿಗಳು ಅವರನ್ನು ಫನ್ಸ್ಪುರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದರು.
ಕರ್ತವ್ಯ ಪಾಲನೆಗೆ ಹೆಸರಾಗಿದ್ದ ವೈದ್ಯ ಖುಟಿಯಾ ಅಗತ್ಯವಾಗಿದ್ದರೆ ದಿನದ ೨೪ ಗಂಟೆ ಆರೋಗ್ಯ ಕೇಂದ್ರದಲ್ಲಿರುತ್ತಿದ್ದರು. ಆರೋಗ್ಯ ಕೇಂದ್ರದ ಹೆರಿಗೆ ವಿಭಾಗದ ಅಭಿವೃದ್ದಿಗೆ ಸಹ ಅವರರ ಕೊಡುಗೆ ಅಪಾರವಾಗಿತ್ತು. ಅವರ ಅಕಾಲಿಕ ನಿಧನ ಅವರ ಶೋದ್ಯೋಗಿಇಗಳಿಗೆ ದುಃಖದ ಕಟ್ಟೆ ಒಡೆಯುವಂತೆ ಮಾಡಿದೆ.
SCROLL FOR NEXT