ಮಾಯಾವತಿ 
ದೇಶ

ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಶಾಸಕಿ ಸಾಧನ ಸಿಂಗ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ ಬಿಎಸ್ಪಿ

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಿ ಸಾಧನ ಸಿಂಗ್ ವಿರುದ್ಧ ಬಿಎಸ್ಪಿ ಇಂದು ದೂರು ದಾಖಲಿಸಿದೆ.

ಚಂದೂಲ್ : ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಬಗ್ಗೆ  ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಿ ಸಾಧನ ಸಿಂಗ್  ವಿರುದ್ಧ ಬಿಎಸ್ಪಿ ಇಂದು ದೂರು ದಾಖಲಿಸಿದೆ.

 ವಾರಣಾಸಿ ಮತ್ತು ಅಜಂಘಡ ವಲಯದ ಬಿಎಸ್ಪಿ ಉಸ್ತುವಾರಿ ರಾಮ್ ಚಂದ್ರ ಗೌತಮ್ ಅವರು ಚಂದೂಲ್ ಜಿಲ್ಲೆಯ ಬಾಬುರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೇಲ್ವರ್ಗಕ್ಕೆ ಸೇರಿರುವ ಸಾಧನಾ ಸಿಂಗ್  ಸಾರ್ವಜನಿಕ ಸಭೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವ ಮಾಯಾವತಿ ವಿರುದ್ಧ  ಆಶ್ಲೀಲ ಭಾಷೆ ಬಳಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಶನಿವಾರ ನಡೆದ ಬಹಿರಂಗ ಸಮಾವೇಶವೊಂದರಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಸಾಧನ ಸಿಂಗ್ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನನ್ನ ಪ್ರಕಾರ ಮಾಯಾವತಿ ಅತ್ತ ಹೆಂಗಸೂ ಅಲ್ಲ, ಇತ್ತ ಗಂಡಸೂ ಅಲ್ಲ. ಕೇವಲ ಅಧಿಕಾರಕ್ಕಾಗಿ ಆಕೆ ತಮ್ಮ ಪ್ರತಿಷ್ಠೆ ಮಾರಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಐಪಿಸಿ ಸೆಕ್ಷನ್ ಅನ್ವಯ ಶಾಸಕಿ ಸಾಧನ ಸಿಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರ ಬಳಿ ಮನವಿ ಮಾಡುವುದಾಗಿ ಗೌತಮ್   ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾ: ಕುಸಿದು ಬಿದ್ದ ನಿರ್ಮಾಣ ಹಂತದ ಗೋದಾಮು; ಹಲವರು ಸಾವು ಶಂಕೆ, ರಕ್ಷಣಾ ಕಾರ್ಯ ಆರಂಭ

‘ಕಾಶ್ಮೀರ ಎಂದಿಗೂ ಭಾರತದ್ದೇ, ಭಾರತದ್ದಾಗಿಯೇ ಉಳಿಯಲಿದೆ’; ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ತಿರುಗೇಟು..!

ICC ODI Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ಶುಭಮನ್ ಗಿಲ್; ಬುಮ್ರಾ ಜತೆ ಅಗ್ರ ಸ್ಥಾನಕ್ಕೇರಿದ ಹೆನ್ರಿ

Triangle love: ವಿವಾಹಿತ ಮಹಿಳೆಗಾಗಿ ಇಬ್ಬರು ಪುರುಷರ ನಡುವೆ ಜಗಳ; ಮಚ್ಚೇಟಿನಿಂದ ಮುಂಗೈ ಕಟ್!

ಮಂಡ್ಯ: ಎರಡು ಗ್ರಾಮ ಪಂಚಾಯಿತಿಗಳಿಂದ ಅಕ್ರಮವಾಗಿ ಇ-ಖಾತಾ ವಿತರಣೆ; ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗ!